ಸುಳ್ಯ ಚೆನ್ನಕೇಶವ ಆಡಳಿತ  ಸಮಿತಿಯ ನಿರ್ಧಾರಕ್ಕೆ  ಹಿಂದೂ ಸಂಘಟನೆ  ಆಕ್ರೋಶ: ಮತ್ತೆ ಮನವಿ.

ಸುಳ್ಯ ಚೆನ್ನಕೇಶವ ಆಡಳಿತ ಸಮಿತಿಯ ನಿರ್ಧಾರಕ್ಕೆ ಹಿಂದೂ ಸಂಘಟನೆ ಆಕ್ರೋಶ: ಮತ್ತೆ ಮನವಿ.


ಸುಳ್ಯ ಚೆನ್ನಕೇಶವ ದೇವಸ್ಥಾನದ ಸಂದರ್ಭ ಅನ್ಯಧರ್ಮಿಯರಿಗೂ ವ್ಯಾಪಾರ ವ್ಯವಹಾರ ನಡೆಸಲು ದೇವಾಲಯದಿಂದ ರಥಬೀದಿ ಜಾಗದ ಏಲಂನಲ್ಲಿ ಭಾಗವಹಿಸಲು ದೇವಸ್ಥಾನ ವ್ಯವಸ್ಥಾಪನ ಸಮಿತಿಯವರು ತೀರ್ಮಾನಿಸಿದ ಬೆನ್ನಲ್ಲೆ ಹಿಂದೂ ಸಂಘಟನೆ ಈ ತೀರ್ಮಾನದ ವಿರುದ್ದ ತೀವ್ರ ಆಕ್ರೂಶ ವ್ಯಕ್ತ ಪಡಿಸಿದ್ದಾರೆ. ಮತ್ತು ಈ ಬಗ್ಗೆ ದೇವಸ್ಥಾನ ಆಡಳಿತ ಸಮಿತಿಗೆ ಮತ್ತೊಮ್ಮೆ ಅನ್ಯಮತೀಯರಿಗೆ ವ್ಯಾಪಾರ ನಡೆಸಲು ಅನುವು ನೀಡಬಾರದು, ಏಲಂನಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಮತ್ತೆ ಮನವಿಯನ್ನು ನೀಡಿರುವ ಘಟನೆ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಭಜರಂಗದಳ, ಹಾಗೂ ವಿವಿಧ ಹಿಂದೂ ಸಂಘಟನೆಯ ಮುಖ್ಯಸ್ಥರು , ದೇವಸ್ಥಾನ ಆಡಳಿತ ಮಂಡಳಿಯವರಿಗೆ ಅನ್ಯ ಧರ್ಮಿಯರಿಗೆ ಏಲಂನಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಮನವಿಯನ್ನು ಸಲ್ಲಿಸಿತ್ತು, ಈ ಬಗ್ಗೆ ಜ.೨ ರಂದು ದೇವಸ್ಥಾನ ಆಡಳಿತ ಸಮಿತಿಯ ಸದಸ್ಯರು ಹಾಗೂ ವಿವಿಧ ಉಪಸಮಿತಿಗಳ ಪಧಾದಿಕಾರಿಗಳು ಸಭೆ ನಡೆಸಿ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡಬಾರದು ಎಂಬ ಹಿಂದೂ ಸಂಘಟನೆಯ ಮನವಿ ಬಗ್ಗೆ ಚರ್ಚಿಸಿತ್ತು ಮತ್ತು ಈ ಬಗ್ಗೆ ಯಾವುದೇ ನಿರ್ಭಂದ ಇಲ್ಲದೆ ಏಲಂನಲ್ಲಿ ಮುಕ್ತ ಅವಕಾಶ ನೀಡುವ ಬಗ್ಗೆ ತೀರ್ಮಾನಕ್ಕೆ ಬಂದಿತ್ತು, ಮತ್ತು ಈ ಬಗ್ಗೆ ಮಾಧ್ಯಮದಲ್ಲಿಯೂ ಸುದ್ದಿ ಬಿತ್ತರವಾಗಿತ್ತು.ಇದಕ್ಕೂ ಮೊದಲು ಹಿಂದೂ ಸಂಘಟನೆಯವರು ದೇವಸ್ಥಾನ ಎದರು ರಥಬೀದಿಯಲ್ಲಿ ಅನ್ಯಮತಿಯರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ಬ್ಯಾನರ್ ಅಳವಡಿಸಿತ್ತು, ಇದನ್ನು ತೆರವು ಮಾಡಬೇಕು ಎಂದು ಮುಸ್ಲಿಂ ಸಂಘಟನೆ ವಿವಿಧ ಅಧಿಕಾರಿಗಳಿಗೆ ಮನವಿ ಮಾಡಿತ್ತು, ಮತ್ತು ಮಾದ್ಯಮ ಹೇಳಿಕೆಯಲ್ಲಿ ಒತ್ತಾಯಿಸಿದ್ದರು ಆದರೆ, ಯಾರೂ ಈ ಬ್ಯಾನರ್ ತೆರವು ಮಾಡಲು ಮುಂದೆ ಬಂದಿರಲಿಲ್ಲ, ಇಷ್ಟೆಲ್ಲಾ ಘಟನೆಯ ನಡುವೆ ಈ ಬಗ್ಗೆ ತನ್ನ ಸಮುದಾಯದ ವ್ಯಾಟ್ಸಪ್ ಗ್ರೂಪ್ ನಲ್ಲಿ ಸುಳ್ಯದ ಯುವಕನೊಬ್ಬ, ಜಾತ್ರೆಗೆ ವ್ಯಾಪಾರಕ್ಕೆ ಅವಕಾಶ ನೀಡದಿದ್ದರೂ ಪರವಾಗಿಲ್ಲ,ಮುಸಲ್ಮಾನರಾದ ನಾವು ವ್ಯಾಪಾರಕ್ಕೆ ಅಲ್ಲಿಗೆ ಯಾವುದೇ ಕಾರಣಕ್ಕು ಹೋಗಬಾರದು, ಮುಸಲ್ಮಾನರು ಯಾವುದೇ ಕಾರಣಕ್ಕು ತಮ್ಮ ಮನೆಯವರನ್ನು ಜಾತ್ರೆ ವ್ಯಾಪಾರಕ್ಕೆ ಕಳಿಸಬಾರದು ಎಂದು ವಾಯ್ಸ್ ಮೆಸೇಜ್ ಕಳಿಸಿದ್ದರು ಅದು ಹೇಗೋ ಹಿಂದು ಸಂಘಟನೆಯವರಿಗೆ ದೊರೆತು, ಹಾಕಿದ ವ್ಯಕ್ತಿಯ ಪೋಟೊ ಸಹಿತ ವಾಯ್ಸ್ ವೈರಲ್ ಆಗಿತ್ತು, ಇದು ಹಿಂದೂ ಸಂಘಟನೆವರ ಆಕ್ರೋಶಕ್ಕೂ ಕಾರಣವಾಗಿತ್ತು , ಡಿ .೪ ರಂದು ಹಿಂದು ಮುಖಂಡರಾದ, ಎಸ್ ಸಿಕ್ಸ್ ಅದ್ಯಕ್ಷ ಚಿದಾನಂದ, ವಿಶ್ವ ಹಿಂದೂ ಪರಿಷತ್ ನ, ಸೋಮಶೇಖರ್ ಪೈಕ, ಲತೀಶ್ ಗುಂಡ್ಯ, ಜಿ.ಜಿ ನಾಯಕ್,ಎನ್ ಎ ರಾಮಚಂದ್ರ, ಕಿಶೋರ್ ಕುಮಾರ್ ಉಳುವಾರು, ಅಜಿತ್ ಪೇರಾಲು, ಮೊದಲಾದವರು ದೇವಸ್ಥಾನ ಆಡಳಿತ ಸಮಿತಿಯ ಕೃಪಾಶಂಕರ್ ತುದಿಯಡ್ಕರಿಗೆ ಮತ್ತೆ ಮನವಿ ಸಲ್ಲಿಸಿದರು,‌ ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಉಪಸ್ಥಿತಿಯಿದ್ದರು‌ ನಂತರ ಸಂಘಟನೆಯ ತಂಡ ಅಲ್ಲಿಂದ ಕಾಯರ್ತೋಡಿ ದೇವಸ್ಥಾನಕ್ಕೆ ಆಗಮಿಸಿದ್ದ, ಎ ಸಿ ಯವರಿಗೆ, ಸುಳ್ಯ ತಹಶೀಲ್ದಾರ್, ಸುಳ್ಯಠಾಣೆಗೆ ಮನವಿಯನ್ನು ಸಲ್ಲಿಸುವ ಉದ್ದೇಶದಿಂದ ತೆರಳಿತ್ತು.ಒಟ್ಟಿನಲ್ಲಿ ಸುಳ್ಯ ದಂತಹ ಸೂಕ್ಷ್ಮ ಪ್ರದೇಶದಲ್ಲಿ ಕೋಮುಗಳ ನಡುವಿನ ಸಂಘರ್ಷಕ್ಕೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ ಮಂಡಳಿ ಉತ್ತಮ ನಿರ್ಣಯ ತೆಗೆದುಕೊಳ್ಳುವ ಅನಿವಾರ್ಯತೆಯಿದೆಯೆಂದು ಸಾರ್ವಜನಿಕರ ಮಾತಾಗಿದೆ.

ರಾಜ್ಯ