
ಕರ್ನಾಟಕ ಗೃಹ ಮಂಡಳಿಯಲ್ಲಿ ಮನೆ ನಿವೇಶನಕ್ಕಾಗಿ ಅರ್ಜಿ ಹಾಕಿದ್ದೀರಾ..?ಹಾಗಿದ್ದರೆ ನೀವು ಈ ಸುದ್ದಿ ಓದಲೇ ಬೇಕು…ಸರಿ ಸುಮಾರು 14 ವರ್ಷಗಳ ಹಿಂದೆ ಅಂದರೆ 2009 ರಲ್ಲಿ ಕರ್ನಾಟಕ ಗೃಹ ಮಂಡಳಿ ಒಂದು ಪ್ರಕಟನೆ ಹೊರಡಿಸಿತ್ತು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯತಾಲೂಕಿನವರಿಗೆ ಸೈಟ್ ನೀಡುವ ಬಗ್ಗೆ ಮುಂಗಡವಾಗಿ, 1000/2000 ರೂ ಗಳನ್ನು ಆಗಿನ ಸಿಂಡಿಕೇಟ್ ಬ್ಯಾಂಕಿನ ಸುಳ್ಯ ಶಾಖೆಯಲ್ಲಿ ಪಾವತಿಸಿ ಬುಕ್ಕಿಂಗ್ ಮಾಡಲು ಸೂಚಿಸಿತ್ತು, ಅದರಂತೆ ಆಗ ಸುಳ್ಯ ತಾಲೂಕೀನ 283 ಮಂದಿ ತಾಮುಂದು ನಾ ಮುಂದು ಎನ್ನುವಂತೆ ಬ್ಯಾಂಕಿನಲ್ಲಿ ಹಣ ಸಂದಾಯ ಮಾಡಿದ್ದರು ಆಂದರೆ ಆಗಿನ ಕಾಲದಲ್ಲಿ ಗೃಹಮಂಡಳಿ ಸುಳ್ಯ ಒಂದೇ ತಾಲೂಕೀನಿಂದ ಬರೋಬ್ಬರಿ 9,88,480 ರೂ ಮೊತ್ತವನ್ನು ಮುಂಗಡವಾಗಿ ಪಡೆದಿತ್ತು, ಆದರೆ 2009 ರಿಂದ ಹಿಡಿದು ಇಂದಿನ ವರೆಗೆ, ಮುಂಗಡ ಬುಕ್ಕಿಂಗ್ ಮಾಡಿದವರಿಗೆ ಇದುವರೆಗೆ ಸೈಟ್ ಆಗಲಿ ಸಂಗ್ರಹಿಸಿದ ಹಣವನ್ನು ಮರು ಪಾವತಿಸದೆ ಇರುವುದು ತಿಳಿದು ಬಂದಿದೆ ಈ ಬಗ್ಗೆ ಅಂದು ಬುಂಕಿಂಗ್ ಮಾಡಿದ್ದ ಗ್ರಾಹಕರು ನೊಂದು, ಮೂರು ನಾಲ್ಕು ವರ್ಷಗಳ ಹಿಂದೆ ಗೃಹ ಮಂಡಳಿ ಆಯುಕ್ತರಿಗೆ ಮತ್ತು ಅಂದಿನ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ನಿವೇದಿಸಿದ್ದರು, ಆದರೂ ಇದರಿಂದ ಯಾವುದೇ ರೀತಿಯ ಪರಿಹಾರ ಸಿಗದೆ ಹತಾಶರಾಗಿದ್ದರು,



ಆದರೆ ಕಳೆದ ಒಂದು ವಾರಗಳಿಂದ ಕರ್ನಾಟಕ ಗೃಹ ಮಂಡಳಿಯವರು ಮತ್ತೆ ಸುಳ್ಯ ನಗರದ ವಿವಿಧ ಭಾಗದಲ್ಲಿ ಬ್ಯಾನರ್ ಗಳನ್ನು ಹಾಕಿ, ಮತ್ತು ಸುಳ್ಯ ಜ್ಯೋತಿ ವೃತ್ತ ಬಳಿ ದೊಡ್ಡದಾದ ಪ್ಲೆಕ್ಸ್ ಹಾಕಿ ಗೃಹ ಮಂಡಳಿಯಲ್ಲಿ ಸೈಟ್ ಖರೀದಿಸಲು ಮಂಗಳೂರಿನ ಸುರತ್ಕಲ್ ಬಳಿ 31 ಎಕರೆ 57 ಸೆಂಟ್ಸ್ ಜಾಗವನ್ನು 50:50 ಅನುಪಾತದಲ್ಲಿ ಎಲ್ಲಾ ಮೂಲ ಸೌಲಭ್ಯದಲ್ಲಿ ನಿವೇಶನ ಹಂಚಿಕೆ ಮಾಡಲು ಯೋಜನೆ ರೂಪಿಸಲಾಗಿದ್ದು ಆಸಕ್ತರು ಇದರ ಉಪಯೋಗ ಪಡೆಯ ಬಹುದು ಎಂದು, ಮತ್ತೆ ಬುಕ್ಕಿಂಗ್ ಕಾರ್ಯ ಆರಂಭಿಸಿದೆ 6×9 ರ 101 ಸೈಟುಗಳು 9×12ರ 212 ಸೈಟುಗಳು9×15 ರ121. ಸೈಟುಗಳು 18×12 ರ 50 ಸೈಟುಗಳು ಲಭ್ಯವಿದ್ದು ನೊಂದಣಿ ಶುಲ್ಕ ಎಂದು, 300, 500, 1000,1500 ಸಂಗ್ರಹಿಸ ತೊಡಗಿದ್ದು, ಆರಂಭಿಕ ಠೇವಣಿ ಎಂದು, 10000, 20000, 30000, ಮತ್ತು 50000 ಘೋಷಣೆ ಮಾಡಿದೆ, ಆದರೆ ಗೃಹಮಂಡಳಿಯವರು ಸುಸಜ್ಜಿತ ಮನೆ ನಿವೇಶ ನೀಡಿರುವುದು ಇದೆ, ಸಾಕಷ್ಟು ಜನರು ಇದರ ಪ್ರಯೋಜನ ಪಡೆದವರಿದ್ದಾರೆ, ಆದರೆ 2009 ರಲ್ಲಿ ಸುಳ್ಯದವರು ಬುಕಿಂಗ್ ಮಾಡಿದ ಹಣ ಮರುಪಾವತಿಸದ ಅಥವಾ ನಿವೇಶನ ತೋರಿಸದ ಗೃಹ ಮಂಡಳಿ ಮತ್ತೆ ಬುಕ್ಕಿಂಗ್ ಆರಂಬಿಸಿರುವುದು ಒಂದಷ್ಟು ಜನಕ್ಕೆ ಸಂಶಯಕ್ಕೆ ಎಡೆಮಾಡಿದೆ ಹಾಗಾಗಿ ಹಿಂದೆ ಬುಕ್ಕಿಂಗ್ ಮಾಡಿದವರು ನ್ಯೂಸ್ ರೂಮ್ ಫಸ್ಟ್ ಗೆ ದಾಖಲೆ ಒದಗಿಸಿದ್ದಾರೆ,

ಈ ಬಗ್ಗೆ ಗೃಹಮಂಡಳಿ ಆಯುಕ್ತರು ಸಂಪರ್ಕಕ್ಕೆ ದೊರಕುತ್ತಿಲ್ಲ.