ಭಜನೆ ಮತ್ತು ಭಜಕರ ವಿರುದ್ದ ಅವಹೇಳನಕಾರಿ ಸಂದೇಶ ಹರಿ ಬಿಟ್ಟ ಆರೋಪದಡಿ ಅಧಿಕಾರಿ ವಿರುದ್ದ ಬೆಳ್ಳಾರೆಯಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಂದ ಪ್ರತಿಭಟನೆ.

ಭಜನೆ ಮತ್ತು ಭಜಕರ ವಿರುದ್ದ ಅವಹೇಳನಕಾರಿ ಸಂದೇಶ ಹರಿ ಬಿಟ್ಟ ಆರೋಪದಡಿ ಅಧಿಕಾರಿ ವಿರುದ್ದ ಬೆಳ್ಳಾರೆಯಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಂದ ಪ್ರತಿಭಟನೆ.

ಸಾಮಾಜಿಕ ಜಾಲತಾಣದಲ್ಲಿ ಭಜನೆ ಮತ್ತು ಭಜಕರ ಬಗ್ಗೆ ಅವಹೇಳನಕಾರಿ ಬರವಣಿಗೆಯನ್ನು ಬರೆದು ಹಿಂದೂ ಧರ್ಮದ ಕುರಿತು ಅಶ್ಲೀಲ ಪದಗಳನ್ನು ಬಳಸಿ ಸಂದೇಶ ಹರಿಯಬಿಟ್ಟ ಕಾಣಿಯೂರು ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರ ವಿರುದ್ಸ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು, ಬಂಧಿಸಿ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಬೆಳ್ಳಾರೆ ಪೋಲಿಸ್ ಠಾಣೆಯ ಎದುರು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡದ ಸಂಘಟನೆಯ ಕಾರ್ಯಕರ್ತರು ಡಿ.೨೯ ರಂದು ಪ್ರತಿಭಟನೆ ನಡೆಸಿದ್ದಾರೆ.ಪ್ರತಿಭಟನಕಾರರು ಆರೋಪಿತ ಅಧಿಕಾರಿಯ ವಿರುದ್ಧ ದೂರು ನೀಡಿದ್ದರೂ ಕಾನೂನು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು.ಸ್ಥಳಕ್ಕೆ ಆಗಮಿಸಿದ ಬೆಳ್ಳಾರೆ ಉಪ ಠಾಣೆಯ ಠಾಣಾಧಿಕಾರಿ ಸುಭಾಷ್ ರವರಿಗೆ ಮನವಿ ಪತ್ರ ನೀಡಿ ಕಾನೂನು ಕ್ರಮಕ್ಕೆ ಒತ್ತಾಯಿಸಲಾಯಿತು.


ಈ ಸಂದರ್ಭದಲ್ಲಿ ಸುಳ್ಯ ಪೋಲಿಸ್ ಠಾಣೆಯ ಎಸ್.ಐ.
ದಿಲೀಪ್ ರವರು ಉಪಸ್ಥಿತರಿದ್ದರು.ಬಳಿಕ ಮಾತನಾಡಿದ ಠಾಣಾಧಿಕಾರಿ ಕಾನೂನು ಪ್ರಕಾರ
ಆರೋಪಿಯ ವಿರುದ್ದ ಕಾನೂನಿನಂತೆ ಕ್ರಮ ಜರುಗಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ನಾಲ್ಕು ದಿನಗಳ ಒಳಗಾಗಿ ಆರೋಪಿಯನ್ನು
ಅಧಿಕಾರಿಗಳು ಬಂಧಿಸಿ ಸರಕಾರಿ ಉದ್ಯೋಗದಿಂದ
ಅಮಾನತು ಮಾಡಬೇಕು. ಇಲ್ಲವಾದಲ್ಲಿ ಮತ್ತೆ ಇಡೀ
ತಾಲೂಕಿನ ಎಲ್ಲಾ ಭಜನಾ ಮಂಡಳಿಯವರನ್ನು ಹಾಗೂ
ಸಂಘಟನೆಯ ಕಾರ್ಯಕರ್ತರನ್ನು ಒಟ್ಟು ಸೇರಿಸಿ ತಾಲೂಕು ಕೇಂದ್ರ ದಲ್ಲಿ ಇಡೀ ದಿವಸ ಕುಳಿತು ಪ್ರತಿಭಟಿಸಲಾಗುವುದೆಂದು ಪ್ರತಿಭಟನಾಕಾರರು ತಿಳಿಸಿದರು. ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಸತೀಶ್ ಕಲ್ಮಕ್ಕಾರು ,ಸಂಘಟನೆಯ ಪ್ರಮುಖ ರಾದ ವಿ.ಹೆ.ಚ್.ಪಿ ಅಧ್ಯಕ್ಷ ಸೋಮಶೇಖರ ಪೈಕ, ವರ್ಷಿತ್ ಚೊಕ್ಕಾಡಿ, ನವೀನ್ ಎಲಿಮಲೆ,ಶ್ರೀನಾಥ್ ಬಾಳಿಲ, ರಂಜಿತ್ ಸುಳ್ಯ, ಸನತ್ ಚೊಕ್ಕಾಡಿ, ಸಚಿನ್ ಪೂವಾಜೆ, ಸಂತೋಷ್ ಬೆಳ್ಳಾರೆ, ರೂಪೇಶ್ ಪೂಜಾರಿ ಮನೆ,ಭರತ್ ಬೆಳ್ಳಾರೆ ಹಾಗೂ ಸಂಘಟನೆಯ ಕಾರ್ಯಕರ್ತರುಮತ್ತು ಭಜನಾ ಪರಿಷತ್ ಸದಸ್ಯರು ಭಾಗವಹಿಸಿದ್ದರು.

ರಾಜ್ಯ