
ಕೆ ವಿ ಜಿ ವಿದ್ಯಾಸಂಸ್ಥೆಗಳ ಸಿಬ್ಬಂದಿಗಳು ಪ್ರತಿಭಟನೆ ನಡೆಸುವುದನ್ನು ಹಿಂಪಡೆಯಲಾಗಿದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ,ಆದಿಚುಂಚನಗಿರಿ ಶ್ರೀ ಡಾ. ನಿರ್ಮಲನಂದನಾಥ ಸ್ವಾಮೀಜಿಗಳು ಡಾ .ಕೆ.ವಿ ರೇಣುಕಾಪ್ರಸಾದ್ ನಿವಾಸಕ್ಕೆ ಅನುಗ್ರಹ ಸಂದೇಶ, ಆಶೀರ್ವಚನ ನೀಡಲು ಆಗಮಿಸಿದ ಸಂದರ್ಭದಲ್ಲಿ ಡಾ . ರೇಣುಕಾಪ್ರಸಾದ್ ದಂಪತಿಗಳಿಂದ ನಡೆದ ಸ್ವಾಮೀಜಿಗಳ ಪಾದಪೂಜೆಯಲ್ಲಿ ಜೊತೆಯಾದ ಕೆ.ವಿ ಜಿ ವಿದ್ಯಾ ಸಂಸ್ಥೆ ಸಿಬ್ಬಂದಿಗಳು , ಕಾರ್ಯಕ್ರಮದ ಕೊನೆಯಲ್ಲಿ ಅಕಾಡೆಮಿಯಲ್ಲಿ ನಡೆಯುತ್ತಿರು ಗೊಂದಲ, ಹಾಗೂ ಇದರಿಂದ



ಸಿಬ್ಬಂದಿಗಳಿಗಾಗುತ್ತಿರುವ ತೊಂದರೆಯ ವಿಧ್ಯಮಾನವನ್ನು ಸ್ವಾಮೀಜಿಗೆ ಮನವರಿಕೆ ಮಾಡಿದರು. ಮತ್ತು ಡಿ .23 ರಂದು ಪ್ರತಿಭಟಿಸುವ ನಿರ್ಧಾರ ಹೇಳಿದರು ,ಈ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ದೈರ್ಯ ತುಂಬಿದ ಸ್ವಾಮೀಜಿಯವರು ವಿದ್ಯಾಸಂಸ್ಥೆಗಳ ಉದ್ಯೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಸ್ಚಾಮೀಜಿಯವರು ಆಶ್ವಾಸನೆ ನೀಡಿದ್ದಾರೆ ಎಂದು ಹೇಳಲಾಗಿದೆ, ಈ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಸಿಬ್ಬಂದಿಗಳು ಹಿಂಪಡೆಯಲಾಗಿದೆ ಎಂದು ತಿಳಿದು ಬಂದಿದೆ .ಆದುದರಿಂದ ಡಿ.23 ನಿಯಮಿತ ಶೈಕ್ಷಣಿಕ ದಿನವಾಗಿದ್ದು ಎಂದಿನಂತೆ ವಿದ್ಯಾಸಂಸ್ಥೆಗಳು ತೆರೆದು ಕಾರ್ಯಾಚರಿಸಲಿದೆ ಎಂದು ಡಾ.ರೇಣುಕಾ ಪ್ರಸಾದ್ ಕೆ.ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

