ಎನ್ನೆಂಸಿ: ವ್ಯವಹಾರ ಆಡಳಿತ ವಿಭಾಗದಿಂದ ದೀಕ್ಷಾ ಟ್ರೇಡರ್ಸ್ ಗೆ ವ್ಯವಹಾರ ಭೇಟಿ.

ಎನ್ನೆಂಸಿ: ವ್ಯವಹಾರ ಆಡಳಿತ ವಿಭಾಗದಿಂದ ದೀಕ್ಷಾ ಟ್ರೇಡರ್ಸ್ ಗೆ ವ್ಯವಹಾರ ಭೇಟಿ.

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ಪ್ರಥಮ ಬಿಬಿಎ ವಿದ್ಯಾರ್ಥಿಗಳಿಗೆ ಸುಳ್ಯದ ಜಟ್ಟಿಪಳ್ಳದಲ್ಲಿರುವ ದೀಕ್ಷಾ ಟ್ರೇಡರ್ಸ್ ಗೆ ವ್ಯವಹಾರ ಭೇಟಿ ಕಾರ್ಯಕ್ರಮವನ್ನು ಡಿಸೆಂಬರ್ 08 ರಂದು ಆಯೋಜಿಸಲಾಗಿತ್ತು. ದೀಕ್ಷಾ ಟ್ರೇಡರ್ಸ್ ನ ಮಾಲಕರಾದ ಮಾಧವ ರಾವ್ ವಿದ್ಯಾರ್ಥಿಗಳೊಂದಿಗೆ ತಮ್ಮ‌ ಸುದೀರ್ಘ ಕಾಲದ ವ್ಯವಹಾರ ಜ್ಞಾನವನ್ನು ಹಂಚಿಕೊಂಡರು. ವ್ಯವಹಾರದಲ್ಲಿ ಇರಬೇಕಾದ ಜಾಣ್ಮೆ, ವ್ಯವಹಾರದ ಲಾಭ – ನಷ್ಟಗಳನ್ನು ವಿವರಿಸುವುದರೊಂದಿಗೆ, ಕೇವಲ ಸರ್ಕಾರಿ ಉದ್ಯೋಗದ ಕಡೆ ಮಾತ್ರ ಗಮನ ಹರಿಸದೆ ಸ್ವ ಉದ್ಯೋಗದ ಕಡೆ ಕೂಡ ಒಲವು ಹರಿಸಬೇಕು ಎಂದರು. ಬಿಬಿಎ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅನಂತಲಕ್ಷ್ಮಿ, ಉಪನ್ಯಾಸಕರುಗಳಾದ ಹರಿಪ್ರಸಾದ್ ಎ ವಿ, ಶ್ರೀಮತಿ ಲೀನಾ ವೈ ಎನ್ ಹಾಗೂ ಮೀನಾಕ್ಷಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು..

ರಾಜ್ಯ