ಸುಳ್ಯ ನಗರಕ್ಕಿಲ್ಲ ಬೈಪಾಸ್ ರಸ್ತೆ…!ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳ ಮಾಹಿತಿ.

ಸುಳ್ಯ ನಗರಕ್ಕಿಲ್ಲ ಬೈಪಾಸ್ ರಸ್ತೆ…!ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳ ಮಾಹಿತಿ.

ಸುಳ್ಯದಲ್ಲಿ ರಸ್ತೆ ಅಗಲೀಕರಣವಾದಲ್ಲಿ ಬೈಪಾಸ್ ರಸ್ತೆ ಆಗಬಹುದೇ….ಇಲ್ಲ ನಡು ಪೇಟೆಯಲ್ಲಿ ರಸ್ತೆ ಅಗಲವಾಗಲಿದೆಯೇ… ಎಂಬ ಜಿಜ್ಞಾಸೆ ಹಲವು ಜನರದ್ದು, ಇದರಲ್ಲಿ ಕಟ್ಟಡ ಮಾಲಿಕರ ಚಿಂತೆ ಒಂದಾದರೆ, ಅಂಗಡಿ ಮಾಲಿಕರ ಚಿಂತೆ ಮತ್ತೊಂದು, ರಿಕ್ಷಾ ಚಾಲಕರಿಗೆ ಪಾರ್ಕಿಂಗ್ ಸಮಸ್ಯೆ, ಟೂರಿಸ್ಟ್ ವಾಹನ ಚಾಲಕರ ಪಾರ್ಕಿಂಗ್ ಸಮಸ್ಯೆ, ಹೀಗೆ ಹಲವಾರು ಮಂದಿ ತಮ್ಮ ಸಮಸ್ಯೆಗೆ ಬೈಪಾಸ್ ರಸ್ತೆ ನಿರ್ಮಾಣವಾದರೆ ಪರಿಹಾರವಾಗಬಲ್ಲದು ಎಂಬ ನಿರೀಕ್ಷೆಯಲ್ಲಿದ್ದರು, ಆದರೆ ಇವರೆಲ್ಲರ ನಿರೀಕ್ಷೆ ಇದೀಗ ತಲೆ ಕೆಳಗಾಗಿದೆ “ಸುಳ್ಯದಲ್ಲಿ ಬೈಪಾಸ್ ರಸ್ತೆ ಮಾಡುವ ಯೋಜನೆ ಸದ್ಯಕಂತೂ ಇಲ್ಲ ಸುಳ್ಯ ಪೇಟೆಯ ಮಧ್ಯೆದಲ್ಲಿಯೇ 40 ಮೀಟರ್ ರಸ್ತೆ ಹಾದು ಹೋಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿ ಈ ಬಗ್ಗೆ ಖಚಿತ ಪಡಿಸಿದ್ದಾರೆ. ಹಾಗಾಗಿ ಸುಳ್ಯದಲ್ಲಿ ಚತುಷ್ಪಥ ರಸ್ತೆ ಬಹುತೇಕ ಖಚಿತ ವಾದಂತೆ ಆಗಿದೆ. ಹಿಂದೆ ಬೈಪಾಸ್ ಚಿಂತನೆ ಇತ್ತು , ಆದರೆ ಇದೀಗ ಬೈಪಾಸ್ ರಸ್ತೆ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ ತಿಳಿದು ಬಂದಿದೆ. ಸದ್ಯಕ್ಕೆ ಆ ಯೋಜನೆ ಇಲ್ಲ ಎಂದು ಖಚಿತ ಪಡಿಸಿದ್ದಾರೆ.ರಸ್ತೆ ಬದಿ ಇದೀಗ ಕಟ್ಟಡ ಕಟ್ಟಲು ಪರವಾನಿಗೆ ಇಲ್ಲ ಈಗಾಗಲೆ ಎಲ್ಲಾ ನಗರ ಪಂಚಾಯತ್ ಮತ್ತು ಪಂಚಾಯತ್ ಗಳಿಗೆ ಈ ಬಗ್ಗೆ ನೋಟಿಸ್ ಮಾಡಲಾಗಿದೆ.ಇದನ್ನು ಮೀರಿ ಅಕ್ರಮವಾಗಿ ಕಟ್ಟಿದಲ್ಲಿ ಯಾವುದೇ ಪರಿಹಾರ ಮಾಲಕರಿಗೆ ಲಭಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ನಗರ ವ್ಯಾಪ್ತಿ ಇರಬಹುದು ಇತರ ಕಡೆಗಳಲ್ಲಿ ರಸ್ತೆ ಅಗಲದಲ್ಲಿ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಸದ್ಯ ಟೆಂಡರ್ ಪ್ರಕ್ರಿಯೆ ಆರಂಭ ಆಗಿಲ್ಲ ಹಾಗಾಗಿ ಈ ಎಲ್ಲಾ ಕಾಮಗಾರಿಗಳಿಗೆ ಮೂರರಿಂದ ನಾಲ್ಕು ವರ್ಷ ಬೇಕಾಗಬಹುದು ಎಂದು ಸುಳ್ಯ ಸಾಮಾಜಿಕ ಕಾರ್ಯಕರ್ತ ಡಿ.ಎಂ ಶಾರಿಕ್ ಸಲ್ಲಿಸಿದ ಅರ್ಜಿಗೆ ಉತ್ತರಿಸಿದ್ದಾರೆ ..

ರಾಜ್ಯ