ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿ ಉದ್ಯಮಿ, ಪರಿಸರವಾದಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಆಯ್ಕೆ ; ಉಪಾಧ್ಯಕ್ಷರಾಗಿ ಸಹಜ್ ರೈ ಬಳಜ್ಜ .

ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿ ಉದ್ಯಮಿ, ಪರಿಸರವಾದಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಆಯ್ಕೆ ; ಉಪಾಧ್ಯಕ್ಷರಾಗಿ ಸಹಜ್ ರೈ ಬಳಜ್ಜ .


ಕರ್ನಾಟಕ ರಾಜ್ಯ ಕುಸ್ತಿ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಉದ್ಯಮಿ ಗುಣರಂಜನ್ ಶೆಟ್ಟಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಸಹಜ್ ರೈ ಬಳಜ್ಜ ಆಯ್ಕೆಯಾಗಿದ್ದಾರೆ.
ಸಾಮಾಜಿಕ, ಧಾರ್ಮಿಕ, ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಗುಣರಂಜನ್ ಶೆಟ್ಟಿ ಅವರು ಜಯಕರ್ನಾಟಕ ಜನಪರ ವೇದಿಕೆ, ಐಕೇರ್ ಬ್ರಿಗೇಡ್ (ರಿ), ಮಹಲಿಂಗೇಶ್ವರ ಸೇವಾ ಟ್ರಸ್ಟ್ (ರಿ) ಇದರ ಸ್ಥಾಪಕಧ್ಯಕ್ಷರೂ ಆಗಿ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನ ತಾವೂ ತೊಡಗಿಸಿಕೊಂಡಿದ್ದಾರೆ.ಸಹಜ್ ರೈ ಅವರು ಯುವ ವಿಜಯ ಸಾಮ್ರಾಟ್ ಸಂಘಟನೆಯ ಮೂಲಕ ಹಲವಾರು ಜನ ಸೇವಾ ಕಾರ್ಯಗಳನ್ನ ಮಾಡಿ ಅಪಾರ ಜನಮೆಚ್ಚುಗೆ ಗಳಿಸಿದ್ದಾರೆ. ಯುವ ಪಡೆಗಳಿಗೆ ಸ್ಪೂರ್ತಿಯಾಗಿ ಮುನ್ನಡೆಯುತ್ತಿರುವ ಸಹಜ್ ರೈ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ರಾಜ್ಯ