
ಉಡುಪಿ: ಜಿಲ್ಲೆಯಲ್ಲಿ ಭಿಕ್ಷಾಟನೆ ನಿರತ ಮಕ್ಕಳ
ರಕ್ಷಣೆಗಾಗಿ ಸಂತೆ ಮಾರ್ಕೆಟ್, ಉಡುಪಿ ಬಸ್
ನಿಲ್ದಾಣ ಹಾಗೂ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ
ಇಂದು ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ
ವಿಶೇಷ ಕಾರ್ಯಚರಣೆ ನಡೆಸಿತು.ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಜಿಲ್ಲಾ
ಬಾಲಕಾರ್ಮಿಕ ಯೋಜನಾ ಸಂಘ, ಸಮಾಜ ಕಲ್ಯಾಣ
ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್
ಇಲಾಖೆ, ಪುರಸಭೆ, ನಗರಸಭೆ, ಹಿರಿಯ ನಾಗರಿಕ
ಸಮಿತಿಯ ಮುಖ್ಯಸ್ಥ ನಿತ್ಯಾನಂದ ಒಳಕಾಡು ಇವರು
ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಹಣ್ಣು
ವ್ಯಾಪಾರದಲ್ಲಿ ತೊಡಗಿದ್ದ ಓರ್ವ ಬಾಲಕನನ್ನು ರಕ್ಷಣೆ
ಮಾಡಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ
ಹಾಜರುಪಡಿಸಲಾಯಿತು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ
ಕುಮಾರ್ ಬಿ.ಆರ್., ತಾಲೂಕು ಸಮಾಜ ಕಲ್ಯಾಣ
ಅಧಿಕಾರಿ ರಮೇಶ್, ತಾಲೂಕು ಹಿರಿಯ ಆರೋಗ್ಯ
ನಿರೀಕ್ಷಣಾಧಿಕಾರಿ ದೇವಪ್ಪ ಪಟಗಾರ, ಕ್ಷೇತ್ರ ಶಿಕ್ಷಣ
ಸಂಯೋಜಕ ಶಂಕರ್, ನಗರಸಭೆ ಅಧಿಕಾರಿ ನಾಗರಾಜ್,ಅಮೃತ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಪೊಲೀಸ್ ಸಿಬ್ಬಂದಿಗಳಾದ ಶ್ರುತಿ, ನಾಗರತ್ನ, ಹಿರಿಯ ನಾಗರಿಕ ಸಮಿತಿಯ ಮುಖ್ಯಸ್ಥ ನಿತ್ಯಾನಂದ ಒಳಕಾಡು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಲೋಚಕಿ ಅಂಬಿಕಾ,ಸಮಾಜ ಕಾರ್ಯಕರ್ತೆ ಸುರಕ್ಷಾ, ಔಟ್ ರೀಚ್ ವರ್ಕರ್ ಸಂದೇಶ್ ಹಾಗೂ ಸುನಂದ ಭಾಗವಹಿಸಿದ್ದರು.

