ಮಡಿಕೇರಿಯಲ್ಲಿ ಮಳೆಹಾನಿ ಸಂತ್ರಸ್ತರಿಗೆ ಮನೆ ನೀಡದ ಸರ್ಕಾರ : ಪ್ರತಿಭಟನೆಗೆ ಜೆಡಿಎಸ್ ನಿರ್ಧಾರ.

ಮಡಿಕೇರಿಯಲ್ಲಿ ಮಳೆಹಾನಿ ಸಂತ್ರಸ್ತರಿಗೆ ಮನೆ ನೀಡದ ಸರ್ಕಾರ : ಪ್ರತಿಭಟನೆಗೆ ಜೆಡಿಎಸ್ ನಿರ್ಧಾರ.


ಮಡಿಕೇರಿ :ಕೊಡಗಿನಲ್ಲಿ 2018 ರಲ್ಲಿ
ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ನೆಲೆ
ಕಳೆದುಕೊಂಡ ಕುಟುಂಬಗಳಿಗೆ ಮಡಿಕೇರಿ
ನಗರದಂಚಿನ ಕೆ.ನಿಡುಗಣೆಯಲ್ಲಿ ನಿರ್ಮಿಸಲಾಗಿರುವ
70 ಮನೆಗಳನ್ನು ಇಲ್ಲಿಯವರೆಗೆ ಹಸ್ತಾಂತರಿಸದೆ ಸರ್ಕಾರದ ನಿರ್ಲಕ್ಷ್ಯ ಮತ್ತು ಜಿಲ್ಲೆಯ ರಸ್ತೆಗಳ ಅವ್ಯವಸ್ಥೆಯನ್ನು ಖಂಡಿಸಿ ನ.28 ರಂದು
ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಜಾತ್ಯತೀತ
ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್
ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು
ಉದ್ಘಾಟಿಸಬೇಕೆನ್ನುವ ಏಕೈಕ ಕಾರಣಕ್ಕಾಗಿ
ಮನೆಗಳನ್ನು ವಿತರಿಸದೆ ವಿಳಂಬ ನೀತಿ ಅನುಸರಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಅನ್ಯಾಯ
ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಜಿಲ್ಲಾಧಿಕಾರಿಗಳ ಕಛೇರಿ ಎದುರು
ಸೋಮವಾರ ಪ್ರತಿಭಟನೆ ನಡೆಸಿ ಮನೆಗಳ
ಹಸ್ತಾಂತರ ಮತ್ತು ರಸ್ತೆಗಳ ದುರಸ್ತಿಗಾಗಿ ಒತ್ತಾಯಿಸಲಾಗುವುದು. ಒಂದು ವಾರದ
ಒಳಗಾಗಿ ಬೇಡಿಕೆಗೆ ಸೂಕ್ತ ಸ್ಪಂದನೆ
ದೊರಯದಿದ್ದಲ್ಲಿ ಉಪವಾಸ ಸತ್ಯಾಗ್ರಹ
ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಜೆಡಿಎಸ್ ಪ್ರಧಾನ
ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ
ನರಸಿಂಹ ಮೂರ್ತಿ, ಜೆಡಿಎಸ್ ವಕ್ತಾರ
ಸಂಕೇತ್ ಪೂವಯ್ಯ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಾಕೃತಿಕ ವಿಕೋಪದಿಂದ
ನೆಲೆ ಕಳೆದುಕೊಂಡವರಿಗಾಗಿ ಕೆ.ನಿಡುಗಣೆಯಲ್ಲಿ
ಸರ್ಕಾರ ಕೈಗೆತ್ತಿಕೊಂಡಿರುವ ಮನೆಗಳ ನಿರ್ಮಾಣ
ಕಾರ್ಯ ಎರಡು ತಿಂಗಳ ಹಿಂದೆಯೇ ಪೂರ್ಣಗೊಂಡಿವೆ. ಹೀಗಿದ್ದೂ ಬಿಜೆಪಿ ನೇತೃತ್ವದ ಸರ್ಕಾರ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಟೀಕಿಸಿದರು.ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ರಸ್ತೆಗಳು ನಿರ್ವಹಣೆ ಇಲ್ಲದೆ
ಸಂಪೂರ್ಣ ಹದಗೆಟ್ಟು ಹೋಗಿವೆ. ಮಡಿಕೇರಿ-
ವಿರಾಜಪೇಟೆ, ವಿರಾಜಪೇಟೆ-ಸಿದ್ದಾಪುರ ರಸ್ತೆ,
ಸೋಮವಾರಪೇಟೆ ರಸ್ತೆ ಹೀಗೆ ಜಿಲ್ಲೆಯ ಪ್ರಮುಖ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿವೆ. ಇವುಗಳ ದುರಸ್ತಿಗೆ ಇಲ್ಲಿಯವರೆಗೆ ಗಮನ ಹರಿಸದ
ಆಡಳಿತ ಪಕ್ಷದ ಜನಪ್ರತಿನಿಧಿಗಳು ಚುನಾವಣೆ
ಸಮೀಪಿಸುವಾಗ ದುರಸ್ತಿ ಕಾರ್ಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಲೇವಡಿ
ಮಾಡಿದರು.ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ
ಯಾವುದೇ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ
ನಡೆಯುತ್ತಿಲ್ಲ.ಹಂತದ ನಗರೋತ್ಥಾನದ ನಾಲ್ಕನೇ
ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಾಗಿದೆ.
ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವಲ್ಲಿ
ಜಿಲ್ಲಾಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ
ಎಂದು ಗಣೇಶ್ ಆರೋಪಿಸಿದರು.ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಹೈಕಮಾಂಡ್ ಸೂಚಿಸುವ ಅಭ್ಯರ್ಥಿಯ ಗೆಲುವಿಗಾಗಿ ಜಿಲ್ಲಾ ಜೆಡಿಎಸ್ ಎಸ್ಟಿ ಬದ್ಧವಾಗಿ ಕಾರ್ಯನಿರ್ವಹಿಸಲಿದೆ. ಸ್ಪರ್ಧೆಗೆ
ನಾನು ಆಕಾಂಕ್ಷಿಯಲ್ಲ ಎಂದು ಅವರು
ಸ್ಪಷ್ಟಪಡಿಸಿದರು. ಪ್ರಸ್ತುತ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಅವರು ಇಸಾಕ್ ಖಾನ್
ಆಕಾಂಕ್ಷೆ ಹೊಂದಿದ್ದಾರೆ. ಉಳಿದಂತೆ ಇಲ್ಲಿಯವರೆಗೆ
ಜಿಲ್ಲಾ ಜೆಡಿಎಸ್‌ಗೆ ಯಾವುದೇ ಚುನಾವಣಾ
ಆಕಾಂಕ್ಷಿಗಳು ಅರ್ಜಿ ಸಲ್ಲಿಸಿಲ್ಲವೆಂದು ತಿಳಿಸಿದರು.

ರಾಜ್ಯ