Uncategorized

ಸಾಂಪ್ರದಾಯಿಕ ದೋಸೆಗೆ – ನೂತನ ರೂಪ ; ಮಿಕ್ಕಿ ಮೌಸ್ ದೋಸೆ

ಭಾರತ ಸರಳ, ಸಾಂಪ್ರದಾಯಿಕ ಹಾಗೆಯೇ ಕೌಶಲ್ಯಗಳ ದೇಶ. ಭಾರತದ ಮನೆ – ಮನೆಗಳಲ್ಲಿ ಮಾಡುವ ಅತಿ ಸಾಧಾರಣವಾದ ತಿಂಡಿ ದೋಸೆ. ಇದು ಅದನ್ನು ತಿಂದು- ತಿಂದು ಬೇಸತ್ತ ಜನರಿಗೆ ದೋಸೆಯೆಂದರೆ ತಾತ್ಸಾರವೇ ಸರಿ. ಆದರೆ, ಅದು ಪ್ರೊಟಿನ್‌ ಮತ್ತು ಕಾರ್ಬೋಹೈಡ್ರೇಟ್‌ಗಳ ಸಮತೋಲಿತ ಮಿಶ್ರಣವಾಗಿದೆ.
ದೋಸೆ ಮಾಡುವುದನ್ನೇ ತಮ್ಮ ಜೀವನೋಪಾಯವಾಗಿಸಿಕೊಂಡ ವ್ಯಾಪಾರಿಗಳು ಈ ನೀರಸ ದೋಸೆಗೆ ಹೊಸ ರೂಪವನ್ನು ನೀಡಿ, ಜನರನ್ನು ಆಕರ್ಷಿಸುತ್ತಿದ್ದಾರೆ. ಸಾಂಪ್ರದಾಯಿಕ ದೋಸೆ ಹಿಟ್ಟನ್ನು ಮಿಕ್ಕಿ ಮೌಸ್ ರೂಪದಲ್ಲಿ ಸಾರಿಸಿ, ಅದಕ್ಕೆ ಕಿವಿ, ಮೂಗು ಮುಂತಾದ ಆಕಾರಗಳನ್ನು ಮಾಡಿ, ರುಚಿಕರವಾದ ಬಣ್ಣಬಣ್ಣದ ಚಟ್ನಿಗಳಿಂದ ಜೋಡಿಸಿ, ನೇರವಾಗಿ ನಿಲ್ಲುವಂತೆ ಮಾಡುತ್ತಾರೆ. ಬೀದಿ ಬದಿಯ ಆಹಾರ ಮಾರಾಟಗಾರರು ಪಾರಂಪರಿಕ ಆಹಾರವನ್ನು ಹೇಗೆ ಆಕರ್ಷಕವಾಗಿ, ವಿಶೇಷವಾಗಿ ಯುವ ಪೀಳಿಗೆಯ ಮನಗೆಲ್ಲುವಂತೆ ತಯಾರಿಸುತ್ತಾರೆ ಎಂಬುದಕ್ಕೆ ಇದು ಒಂದು ಉತ್ತಮ ಉದಾಹರಣೆ. ಬೆಂಗಳೂರು, ಹೈದರಾಬಾದ್ ಮತ್ತು ದಕ್ಷಿಣ ಕರ್ನಾಟಕದ ಅನೇಕ ಅಂಗಡಿಗಳಲ್ಲಿ ಇಂತಹ ಪ್ರತಿಭೆಯನ್ನು ಕಾಣಬಹುದು.

Leave a Response

error: Content is protected !!