ಸುಳ್ಯ ಪೊಲೀಸ್ ಠಾಣಾ ವ್ಯಾಪ್ರಿಯಲ್ಲಿ ಸೆ.16. ರಂದು ದಾಖಲಾಗಿದ್ದ ಮೋಟರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೋಲಿಸರು, ಕೊಡಗು ಸೋಮವಾರಪೇಟೆ ಬಸವನಹಳ್ಳಿ ನಿವಾಸಿಯಾದ ಆರೋಪಿ ಸುಬ್ರಮಣಿ (26) ಎಂಬಾತನನ್ನು ಸುಳ್ಯ ತಾಲೂಕು ಆಲಟ್ಟಿ ಗ್ರಾಮದ ಸರಳಿಪಂಜ ಎಂಬಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ .
ಸುಳ್ಯ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡ ಕ್ಷೀಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ವರದಿಯಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಇದೀಗ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ
ಆರೋಪಿತನು ಈ ಹಿಂದೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಹಾಗೂ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಇದಲ್ಲದೆ ಆರೋಪಿತನು ಇತ್ತೀಚೆಗೆ ಕೆಲ ದಿನಗಳ ಹಿಂದೆ ಸುಳ್ಯ ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರ ಪರ್ಸ್ ತೆಗೆದುಕೊಂಡು ಹೋಗಿದ್ದು ತನಿಖೆ ವೇಳೆ ತಿಳಿದುಬಂದಿರುತ್ತದೆ.
add a comment