ಸುಳ್ಯ ಅ.5 ರಂದು ಸಂಜೆ ಸುಳ್ಯ ತಾಲೂಕಿನ ವಿವಿದೆಡೆ ಸುರಿದ ಮಳೆ ಮತ್ತು ಜೋರಾಗಿ ಬೀಸಿದ ಗಾಳಿಯಿಂದ ಬೃಹತ್ ಕಾರದ ಮರವೊಂದು, ವಿದ್ಯುತ್ ತಂತಿ ಸಮೇತ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಘಟನೆ ಪುತ್ತೂರು ಸುಳ್ಯ ರಸ್ತೆಯ ಆನೆಗುಂಡಿಯಲ್ಲಿ ವರದಿಯಾಗಿದೆ . ರಾಷ್ಟ್ರೀಯ ಹೆದ್ದಾರಿಯಾಗಿದ್ದು ರಸ್ತೆ ಸಂಚಾರ ಸದ್ಯ ಬಂದ್ ಆಗಿದೆ, ಹಲವು ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು ವಿದ್ಯುತ್ ಸಂಪರ್ಕ ನಿಲುಗಡೆಯಾಗಿದೆ.
add a comment