ರಾಜ್ಯ

ಕೊರಗಜ್ಜನಿಗೆ ಅಪಚಾರ : ಕಲ್ಜಿಗ ಚಿತ್ರದ ವಿರುದ್ಧ ಬಾಯ್ಕಾಟ್‌ ಅಭಿಯಾನ  :ದೈವಾರಾಧನೆ ಸಂರಕ್ಷಣಾ ವೇದಿಕೆಯಿಂದ ತೀವ್ರ ಆಕ್ರೋಶ

ಮಂಗಳೂರು: ಕರಾವಳಿಯ ಕಲಾವಿದರೇ ಇರುವ , ಕರಾವಳಿಯವರೇ ನಿರ್ಮಿಸಿ ನಿರ್ದೇಶೀಸಿರುವ ಕನ್ನಡ ಚಿತ್ರ ಕಲ್ಜಿಗದಲ್ಲಿ ದೈವಕ್ಕೆ ಅಪಚಾರ ಎಸಗಿರುವುದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಚಿತ್ರದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಈಗಾಗಲೇ ವಿರೋಧ ಬರಲಾರಂಭಿಸಿದೆ. ಚಿತ್ರದಲ್ಲಿರುವ ಕೊರಗಜ್ಜ ದೈವದ ಅನುಕರಣೆಯ ದೃಶ್ಯ ಕರಾವಳಿಯ ದೈವಾರಾಧಕರ ಆಕ್ರೋಶಕ್ಕೆ ಗುರಿಯಾಗಿದೆ.ಜನಪ್ರಿಯ ನಟ ದೇವದಾಸ್‌ ಕಪಿಕಾಡ್‌ ಅವರ ಪುತ್ರ ಅರ್ಜುನ್‌ ಕಾಪಿಕಾಡ್‌ ಅವರನ್ನು ದೊಡ್ಡಮಟ್ಟದಲ್ಲಿ ಕನ್ನಡ ಇಂಡಸ್ಟ್ರಿಗೆ ಪರಿಚಯಿಸುವ ಉದ್ದೇಶದಿಂದ ಕಲ್ಜಿಗ ಚಿತ್ರ ತಯಾರಾಗಿತ್ತು. ಆದರೆ ಚಿತ್ರಕ್ಕೆ ಬಿಡುಗಡೆಯಾದ ಕೂಡಲೇ ಕರಾವಳಿಯಲ್ಲೇ ವಿರೋಧ ವ್ಯಕ್ತವಾಗಿದೆ.ಸಿನಿಮಾದಲ್ಲಿರುವ ದೈವದ ದೃಶ್ಯ ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದೆ. ಕಲ್ಜಿಗ ಸಿನಿಮಾದಲ್ಲಿ ಕೊರಗಜ್ಜ ದೈವದ ಅನುಕರಣೆ ಮಾಡಿ ಚಿತ್ರೀಕರಣ ಮಾಡಿರುವುದಕ್ಕೆ ಚಿತ್ರತಂಡದ ವಿರುದ್ಧ ಮಂಗಳೂರಿನ ದೈವಾರಾಧನೆ ಸಂರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.ಕೊರಗಜ್ಜನ ವೇಷಭೂಷಣ ಧರಿಸಿದ ನಟನೋರ್ವ ಸಿನಿಮಾದ ಶೂಟಿಂಗ್‌ಗಾಗಿ ನರ್ತನ ಮಾಡಿದ್ದಾರೆ. ಈ ದೃಶ್ಯಕ್ಕೆ ಸಿನಿಮಾ ತಂಡದ ವಿರುದ್ಧ ಮಂಗಳೂರಿನ ದೈವಾರಾಧನೆ ಸಂರಕ್ಷಣಾ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.ಸಾಮಾಜಿಕ ಜಾಲತಾಣದಲ್ಲೂ ಬಾಯ್ಕಾಟ್ ಕಲ್ಜಿಗ ಅಭಿಯಾನ ಆರಂಭಗೊಂಡಿದೆ. ಕಲ್ಜಿಗ ನಿನ್ನೆಯಷ್ಟೇ ರಾಜ್ಯಾದ್ಯಂತ ತೆರೆಗೆ ಬಂದಿದ್ದು, ಅರ್ಜುನ್ ಕಾಪಿಕಾಡ್ ನಟಿಸಿರುವ ಈ ಸಿನಿಮಾ ವಿರುದ್ಧ ಕಾನೂನು ಹೋರಾಟ ಮಾಡುವುದಕ್ಕೆ ನಿರ್ಧರಿಸಿದ್ದಾರೆ

Leave a Response

error: Content is protected !!