ಬೆಳ್ತಂಗಡಿ ಇಂದು ದಿನವಿಡೀ ನಡೆದ ಶಾಸಕ ಹರೀಶ್ ಪೂಂಜಾ ಹಾಗೂ ಅವರ ಬೆಂಬಲಿಗರು ಮತ್ತು ಬೆಳ್ತಂಗಡಿ ಪೋಲಿಸರ ನಡುವಿನ ಚಕಮಕಿಯ ಬಳಿಕ ಪೋಲಿಸರು ಆರೋಪಿತ ಹರೀಶ ಪೂಜಾರಿಗೆ ನೋಟೀಸ್ ನೀಡಿ ತೆರಳಿದ್ದರು.ಸಂಸದ ನಳೀನ್ ಕುಮಾರ್ ಕಟೀಲ್ ಅವರನ್ನು ಠಾಣೆಗೆ ಹಾಜರು ಪಡಿಸುವ ಬರವಸೆ ಪೋಲಿಸರಿಗೆ ನೀಡಿದ ಹಿನ್ನಲೆಯಲ್ಲಿ ಪೋಲಿಸರು ಸ್ಥಳದಿಂದ ತೆರಳಿದ್ದರು ಇದೀಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಾತ್ರಿ 9.30ರ ಸುಮಾರಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಶಾಸಕರ ಮನೆ ಮುಂದೆ ದಿನವಿಡೀ ಪೊಲೀಸರು ಕಾದರೂ ಕಾರ್ಯಕರ್ತರು ಶಾಸಕರನ್ನು ವಶಕ್ಕೆ ಪಡೆಯಲು ಅವಕಾಶ ನೀಡಿರಲಿಲ್ಲ. ರಾಜ್ಯದ ಪ್ರಮುಖ ಬಿಜೆಪಿ ನಾಯಕರು ಹರೀಶ್ ಪೂಂಝಾ ಪರವಾಗಿವಸರಕಾರದ ವಿರುದ್ಧ ಗುಡುಗಿದ್ದರು.
add a comment