ಭಾರತೀಯ ತೀಯ ಸಮಾಜ ವಾರ್ಷಿಕ ಮಹಾಸಭೆ ಅಧ್ಯಕ್ಷ ರಾಗಿ ಪವಿತ್ರನ್ ಗುಂಡ್ಯ, ಕಾರ್ಯದರ್ಶಿಯಾಗಿ ರಾಜೇಶ್ ಕುತ್ತಮೊಟ್ಟೆ, ಕೋಶಾಧಿಕಾರಿ ಯಾಗಿ ಸುನಿಲ್ ಕುಮಾರ್ ಕೆ. ಸಿ ಪುನರಾಯ್ಕೆ
ಭಾರತೀಯ ತೀಯ ಸಮಾಜ ವಲಯ ಸಮಿತಿ ಸುಳ್ಯ ಇದರ ವಾರ್ಷಿಕ ಮಹಾಸಭೆಯು ದಿನಾಂಕ 22 ರಂದು ಸಿ. ಎ ಬ್ಯಾಂಕ್ ವಾಣಿಜ್ಯ ಸಂಕೀರ್ಣ ದಲ್ಲಿ ಸಮಿತಿಯ ಅಧ್ಯಕ್ಷರಾದ ಪವಿತ್ರನ್ ಗುಂಡ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು ಕಾರ್ಯದರ್ಶಿ ರಾಜೇಶ್ ಕುತ್ತಮೊಟ್ಟೆ ಯವರು ಕಳೆದ ಸಾಲಿನ ವಾರ್ಷಿಕ ವರದಿ ಯನ್ನು ಮಂಡಿಸಿದರು ಕೋಶಾ ಧಿಕಾರಿ ಸುನಿಲ್ ಕುಮಾರ್ ಕೆ. ಸಿ ಯವರು ಲೆಕ್ಕ ಪತ್ರ ಮಂಡಿಸಿದರು.
ನಂತರ ನಡೆದ ಸಮಿತಿ ಪುನರ್ ರಚನೆ ಪ್ರಕ್ರಿಯೆ ಯಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಹಾಲಿ ಪದಾಧಿಕಾರಿಗಳನ್ನೇ ಮುಂದುವರಿಸುವ ತೀರ್ಮಾನ ದಂತೆ ಅಧ್ಯಕ್ಷರಾಗಿ ಪವಿತ್ರನ್ ಗುಂಡ್ಯ ಕಾರ್ಯದರ್ಶಿ ಯಾಗಿ ರಾಜೇಶ್ ಕುತ್ತಮೊಟ್ಟೆ ಕೋಶಾಧಿಕಾರಿಯಾಗಿ ಸುನಿಲ್ ಕುಮಾರ್ ಕೆ. ಸಿ ಯವರು ಪುನರಾಯ್ಕೆ ಗೊಂಡರು ಸದಸ್ಯರು ಗಳಾಗಿ ಭಾಸ್ಕರ ಅಡ್ಕಾರು ನಿವೃತ್ತ ಎ. ಎಸ್. ಐ, ಜಗದೀಶ್ ಬೇರ್ಪಡ್ಕ, ಸುರೇಶ್ ಕುತ್ತಮೊಟ್ಟೆ, ಶ್ರೀಧರ ಕಲ್ಲುಗುಂಡಿ, ಪುರುಷೋತಮ ನಾವೂರು, ಪ್ರದೀಪ್ ಅ ರಂತೋಡು, ಶಿಲ್ಪಾ ಸುದೇವ್, ವಿಜಯ ಲಕ್ಷ್ಮಿ ಟೀಚರ್,ಯತೀರಾಜ್ ಮಂಡೆಕೋಲು, ಸುಮತಿ ಮಂಡೆಕೋಲು, ಅನಿಲ್ ಕುಮಾರ್ ಕೆ. ಸಿ, ಶ್ರೀಜಿತ್ ಅರಂತೋಡು, ಅಂಬುಜಾಕ್ಷ ಅರಂತೋಡು, ದಯಾನಂದ ಅಡ್ಕಾರು, ಕನಕ ಲತಾ ಜಟ್ಟಿಪಳ್ಳ,ಜಯಪ್ರಕಾಶ್ ಅರಂಬೂರು, ರಾಜೇಶ್ ಅಮೈ ಯವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಸಮಿತಿ ಗಳನ್ನು ಬಲವರ್ಧನೆ ಗೊಳಿಸಿ ವಲಯ ಸಮಿತಿಗೆ ಇನ್ನಷ್ಟು ಸದಸ್ಯರನ್ನು ಮತ್ತು ಪದಾಧಿಕಾರಿಗಳ ಸೇರ್ಪಡೆ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸುವ ಬಗ್ಗೆ ತೀರ್ಮಾನಿಸಲಾಯಿತು ಕಾರ್ಯದರ್ಶಿ ರಾಜೇಶ್ ಕುತ್ತಮೊಟ್ಟೆ ಯವರು ಪ್ರಾರ್ಥಿಸಿ ವಿಜಯಲಕ್ಷ್ಮಿ ಟೀಚರ್ ರವರು ವಂದನಾರ್ಪಣೆ ಗೈದರು