ಮನೋರಂಜನೆ

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಹೂವಿನಲ್ಲಿ ಅರಳಿದ ರಾಮಾಯಣ

ಬೆಂಗಳೂರು: 2025ರ ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾದ 217ನೇ ಫಲಪುಷ್ಪ ಪ್ರದರ್ಶನ ಜನವರಿ 16ರಿಂದ 26ರವರೆಗೆ ಭವ್ಯವಾಗಿ ನಡೆಯುತ್ತಿದೆ. ಈ ಬಾರಿ “ಆದಿಕವಿ ಮಹರ್ಷಿ ವಾಲ್ಮೀಕಿ” ಅವರ ಭವ್ಯ ಪುಷ್ಪ ಆಕೃತಿಗಳು ಮತ್ತು ರಾಮಾಯಣದ ವೈಭವ ಈ ಪ್ರದರ್ಶನದ ಮುಖ್ಯ ಆಕರ್ಷಣೆಗಳಾಗಿವೆ.

ಪ್ರದರ್ಶನದ ವೈಶಿಷ್ಟ್ಯತೆ:

ಗಾಜಿನ ಮನೆಯಲ್ಲಿ ವಾಲ್ಮೀಕಿಯ ಬೃಹತ್ ಪುಷ್ಪ ಪ್ರತಿಮೆ, ನೇಪಾಳದ ವಾಲ್ಮೀಕಿ ದೇವಾಲಯದ ಪುಷ್ಪ ಮಾದರಿ, ಮತ್ತು ಹೂಗಳಿಂದ ಅಲಂಕರಿಸಿದ ರಾಮಾಯಣದ ಕಥಾ ಪರಂಪರೆ, ಜನರನ್ನು ಆಕರ್ಷಸುತ್ತಿದೆ.

ಭಾನುವಾರದ ಉತ್ಸಾಹ:

ರಜಾದಿನದ ಹಿನ್ನೆಲೆಯಲ್ಲಿ ಭಾನುವಾರ ಲಾಲ್‌ಬಾಗ್‌ನಲ್ಲಿ ಜನಸಾಗರ ಹರಿದು ಬಂದಿದೆ. ಮಳೆಯ ನಡುವೆಯೂ ಸಾವಿರಾರು ಜನರು ಲಾಲ್‌ಬಾಗ್‌ಗೆ ಭೇಟಿ ನೀಡಿದ್ದು, ಹೂವಿನ ಸೌಂದರ್ಯವನ್ನು ಸವಿದಿದ್ದಾರೆ.

ಟಿಕೆಟ್ ದರಗಳು:

ವಯಸ್ಕರಿಗೆ: ವಾರದ ದಿನಗಳಲ್ಲಿ ₹80, ವಾರಾಂತ್ಯದಲ್ಲಿ ₹100

ಮಕ್ಕಳಿಗೆ: ಎಲ್ಲಾ ದಿನಗಳಲ್ಲಿ ₹30

ಸಮಯ:ಬೆಳಗ್ಗೆ 7 ರಿಂದ ಸಂಜೆ 7 ರ ವರೆಗೆ ತೆರೆದಿರುತ್ತದೆ.

Leave a Response

error: Content is protected !!