ಶೈಕ್ಷಣಿಕ

ಶಿಕ್ಷಣ ಬ್ರಹ್ಮ ಡಾ. ಕುರುಂಜಿ ವೆಂಕಟರಮಣ ಗೌಡರ 96ನೇ ಹುಟ್ಟುಹಬ್ಬ: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ ಕಮಿಟಿ ಬಿ ವತಿಯಿಂದ ಡಾ.ಕೆ.ವಿ.ಜಿ ಅವರ ಪುತ್ಥಳಿಗೆ ಪುಷ್ಪ ನಮನ.

ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಮರ ಸುಳ್ಯದ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ‌ ಗೌಡರ 96ನೇ ಜನ್ಮ ದಿನಾಚರಣೆಯ ಅಂಗವಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ವತಿಯಿಂದ ಕುರುಂಜಿಭಾಗ್‌ನಲ್ಲಿರುವ ಡಾ.ಕೆ.ವಿ.ಜಿ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಕೆ.ವಿ.ಜಿ ಅವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ಕೆ.ವಿ.ರೇಣುಕಾಪ್ರಸಾದ್ ಅವರು ಡಾ.ಕುರುಂಜಿ ವೆಂಕಟ್ರಮಣ ಗೌಡರು ಸಾವಿರಾರು ಮಂದಿಗೆ ಶಿಕ್ಷಣ ನೀಡಿ ಅವರು ದೇಶ ವಿದೇಶದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ , ಸಾವಿರಾರು ಮಂದಿಗೆ ಉದ್ಯೋಗ ನೀಡುವ ಮೂಲಕ ಅವರ ಪಾಲಿನ ಅನ್ನದಾತರಾಗಿದ್ದಾರೆ, ಅವರ ಬದುಕು ನಮಗೆ ದೊಡ್ಡ ಆದರ್ಶ ಎಂದು ಹೇಳಿದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಕಮಿಟಿ ಬಿಯ ಪ್ರಧಾನ ಕಾರ್ಯದರ್ಶಿ ಜ್ಯೋತಿ ಆರ್. ಪ್ರಸಾದ್, ನಿರ್ದೇಶಕರಾದ ಮೌರ್ಯ ಆರ್.ಕುರುಂಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಊರುಬೈಲು, ಪ್ರಮುಖರಾದ ಎಸ್.ಎನ್.ಮನ್ಮಥ, ಎನ್.ಎ.ರಾಮಚಂದ್ರ, ಪಿ.ಬಿ.ಸುಧಾಕರ ರೈ, ಸಂತೋಷ್ ಜಾಕೆ, ಬಾಲಗೋಪಾಲ ಸೇರ್ಕಜೆ, ಕೆ.ಎಂ.ಮುಸ್ತಫ, ಎಸ್.ಸಂಶುದ್ದೀನ್, ಶಾಫಿ ಕುತ್ತಮೊಟ್ಟೆ, ಸುನಿಲ್ ಕೇರ್ಪಳ, ಸೂರಯ್ಯ ಸೂಂತೋಡು, ಗಿರೀಶ್ ಕಲ್ಲುಗದ್ದೆ, ಶೈಲೇಶ್ ಅಂಬೆಕಲ್ಲು, ಕೆವಿಜಿ ಶಿಕ್ಷಣ ಸಂಸ್ಥೆಗಳ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ಉದ್ಯೋಗಿಗಳಾದ ಡಾ.ಸುರೇಶ್, ಡಾ.ಮೋಕ್ಷಾ ನಾಯಕ್, ಯಶೋಧಾ ರಾಮಚಂದ್ರ, ಚಿದಾನಂದ ಬಾಳಿಲ, ಅರುಣ್ ಕುಮಾರ್, ಅಣ್ಣಯ್ಯ, ಮಾಧವ ಬಿ.ಟಿ, ಪ್ರಸನ್ನ ಕಲ್ಲಾಜೆ, ಭವಾನಿಶಂಕರ ಅಡ್ತಲೆ, ನಾಗೇಶ್ ಕೊಚ್ಚಿ, ಡಾ.ಮನೋಜ್, ಡಾ.ಎಂ.ಎಂ.ದಯಾಕರ್, ದಿನೇಶ್ ಮಡ್ತಿಲ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೆವಿಜಿ ವಿವಿದೊದ್ಧೇಶ ಸೌಹಾರ್ದ ಸಹಕಾರಿ‌ ಸಂಘದ 2025ನೇ ವರ್ಷದ ಕ್ಯಾಲೆಂಡರ್ ಅನ್ನು ಡಾ.ಕೆ.ವಿ.ರೇಣುಕಾಪ್ರಸಾದ್ ಅವರು ಬಿಡುಗಡೆ ಮಾಡಿದರು.

Leave a Response

error: Content is protected !!