ಶಾಲಾ ಬಾಲಕನಿಗೆ ಥಳಿಸಿದ ಶಿಕ್ಷಕ | ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ ಪೋಷಕರು.
ಕಡಬ : ಸರ್ಕಾರಿ ಶಾಲಾ ಸಹಶಿಕ್ಷಕನೊಬ್ಬ ಹೊಡೆದ ಏಟಿನ ರಭಸಕ್ಕೆ ಶಾಲಾ ಬಾಲಕನ ತಲೆ ಪಕ್ಕದಲ್ಲಿದ್ದ ಕವಾಟಿಗೆ ತಾಗಿ ಗಾಯಗೊಂಡು, ಆತನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ ಘಟನೆ ಜೂ.6 ರಂದು ಕಡಬದಿಂದ ವರದಿಯಾಗಿದೆ. ಶಿಕ್ಷಕ ಕುಳಿತುಕೊಳ್ಳುವ ಕುರ್ಚಿಯಲ್ಲಿ ಬಟ್ಟೆ ಇದ್ದದ್ದನ್ನು ಗಮನಿಸಿದ ಶಿಕ್ಷಕ ಈ ವಿದ್ಯಾರ್ಥಿಯೇ ಇಟ್ಟಿರುವುದಾಗಿ ಸಂಶಯಿಸಿ…










