ಹೊಸದಿಲ್ಲಿಯಲ್ಲಿ 13 ವರ್ಷದ ಅಫ್ಘನ್ ಬಾಲಕ ವಿಮಾನದ ಚಕ್ರದಲ್ಲಿ ಅವಿತು ಜೀವಂತವಾಗಿ ಬಂದಿಳಿದ ಘಟನೆ!
13 ವರ್ಷದ ಅಫ್ಘನ್ ಬಾಲಕನೊಬ್ಬ ವಿಮಾನದ ಹಿಂಬದಿ ಚಕ್ರದಲ್ಲಿ ಅವಿತಿಟ್ಟುಕೊಂಡು ಜೀವಂತವಾಗಿ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿರುವ ಘಟನೆ ಬೆಳಕಿಗೆ ಬಂದಿದೆ. 94 ನಿಮಿಷಗಳ ಈ ಅಪಾಯಕಾರಿ ಪ್ರಯಾಣದಲ್ಲಿ ಬಾಲಕ ಜೀವಂತವಾಗಿ ಬದುಕುಳಿದು, ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಿರ ಆರೋಗ್ಯ ಸ್ಥಿತಿಯೊಂದಿಗೆ ಪತ್ತೆಯಾಗಿದ್ದಾನೆ.…










