ತಮಿಳುನಾಡಿನಲ್ಲಿ ಮತ್ತೊಂದು ದುರ್ಘಟನೆ – 9 ಮಂದಿ ಅಸ್ಸಾಂ ಮೂಲದ ಕಾರ್ಮಿಕರ ದಾರುಣ ಸಾವು
ತಮಿಳುನಾಡಿನ ಪೊನ್ನೇರಿಯ ಎಣ್ಣೋರ್ ಬಿಎಚ್‌ಇಎಲ್ ತಾಪ ವಿದ್ಯುತ್ ಘಟಕದ ನಿರ್ಮಾಣ ಕಾರ್ಯದಲ್ಲಿ ಭೀಕರ ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಆರ್ಚ್ ಕುಸಿದ ಪರಿಣಾಮ, ಕೆಳಗೆ ಬಿದ್ದ 9 ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನೂ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚೆನ್ನೈನ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.…










