

ಪಕ್ಷ ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಇರುವವನೇ ಬಿಜೆಪಿ ಕಾರ್ಯಕರ್ತ,ಈ ಬಾರಿಯ ಚುನಾವಣೆಯಲ್ಲಿ ಭಾರತದ ಪ್ರದಾನಿಯಿಂದ ಹಿಡಿದು ಬೂತ್ ಗಳ ಸಮಾನ್ಯ ಕಾರ್ಯಕರ್ತನೂ ದುಡಿದ್ದಿದ್ದಾರೆ , ಹಾಗಾಗಿ ಸೋಲುಗಳನ್ನು ಯಾರತಲೆಗೂ ಕಟ್ಟುವುದು ಸಮಂಜಸವಲ್ಲ,ಸೋಲಿರಲಿ ಗೆಲುವಿರಲಿ ಭಾರತೀಯ ಜನತಾ ಪಾರ್ಟಿ ಎಲ್ಲವನ್ನು ಸಮಾನವಾಗಿ ಸ್ವೀಕರಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದ್ದಾರೆ ಅವರು ಕೇರ್ಪಳದ ಬಂಟರ ಭವನದಲ್ಲಿ ಸುಳ್ಯ ಮಂಡಲ ಭಾರತೀಯ ಜನತಾ ಪಾರ್ಟಿ
ವತಿಯಿಂದ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಕಾರ್ಯಕರ್ತರಿಗೆ ಅಭಿನಂದನಾ ಸಭೆಯಲ್ಲಿ ಪ್ರಧಾನ ಭಾಷಣ ನೆರವೇರಿಸಿ ಮಾತುಗಳನ್ನಾಡುತ್ತಾ , ಲಾಲ್ ಕೃಷ್ಣ ಅಡ್ವಾಣಿ ಕಾಲದಿಂದ ಹಿಡಿದು ಇಂದಿನ ವರೆಗೂ ಸುಳ್ಯದಲ್ಲಿ ಸತತ 7 ಬಾರಿ ಬಿಜೆಪಿಯನ್ನು ಗೆಲ್ಲಿಸಿದ ಮತದಾರರಿಗೆ ಅಭಿನಂದನೆಗಳು,ಇದು ಅಭಿನಂದನೆ ಸಭೆ ಮಾತ್ರವಲ್ಲ 2024 ರ ಲೋಕಸಭಾ ಚುನಾವಣೆಯ ಆರಂಭಿಕ ಸಭೆಯೂ ಹೌದು ಎಂದು ಹೇಳಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನುಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ವಹಿಸಿದ್ದರು. ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಮಾತನಾಡಿ ಬಿಜೆಪಿ ಅದಿಕಾರಕ್ಕೆ ಆಸೆ ಪಡುವ ಪಕ್ಷವಲ್ಲ ಕಾರ್ಯಕರ್ತರ ಇಚ್ಚೆಗಳನ್ನು ಅರಿತು ಕೆಲಸ ಮಾಡುವ ಪಕ್ಷ, ಸಮಾಜದಲ್ಲಿ ಪರಿವರ್ತನೆಗಾಗಿ ಬಂದ ಪಕ್ಷ, ಅಂಗಾರರ ಅವಧಿಯಲ್ಲಿ ಮಾಡಿದ ಅಭಿವೃದ್ಧಿಕೆಲಸಗಳಿಂದ ಸುಳ್ಯದಲ್ಲಿ ಈ ರೀತಿಯ ಗೆಲುವಿಗೆ ಕಾರಣವಾಗಿದೆ. ಮುಂದಿನ ಚುನಾವಣೆಯಲ್ಲಿ ಬಾರತೀಯ ಜನತಾ ಪಾರ್ಟಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕ ಸಂಜೀವ
ಮಠಂದೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ
ರಾಮದಾಸ್ ಬಂಟ್ವಾಳ, ಕಸ್ತೂರಿ ಪಂಜ, ಪ್ರಮುಖರಾದ ರಾಧಾಕೃಷ್ಣ ಬೂಡಿಯೂರು, ಆಶಾ ತಿಮ್ಮಪ್ಪ ,ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಸುಭೋದ್ ಶೆಟ್ಟಿ ಮೇನಾಲ, ಎಸ್.ಎನ್.ಮನ್ಮಥ, ಗುರುದತ್ ನಾಯಕ್
ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಎ.ವಿ.ತೀರ್ಥರಾಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.ವಿನಯಕುಮಾರ್ ಕಂದಡ್ಕ ವಂದೇ ಮಾತಂ ಹಾಡಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು, ಮುಖಂಡರು, ವಿವಿಧ ಪದಾಧಿಕಾರಿಗಳು, ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಾಶಕ್ತಿ ಕೇಂದ್ರಗಳ ಅದ್ಯಕ್ಷ ಮತ್ತು ಕಾರ್ಯದರ್ಶಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.





