ಬೆಳ್ತಂಗಡಿ: ಕೆಲಸ ಕೊಡಿಸುವ ನೆಪದಲ್ಲಿ ವಿವಾಹಿತ ಮಹಿಳೆಯನ್ನು ಕಿಡ್ನಾಪ್ ಮಾಡಿ ಬಳಿಕ ಕಾರಿನಲ್ಲೇ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉದ್ಯಮಿಯೋರ್ವನ ವಿರುದ್ದ ದೂರು ದಾಖಲಾಗಿದೆ.


ಸಂತ್ರಸ್ತೆ ನೀಡಿದ ದೂರಿನ ಮೇಲೆ, ಮಹಾವೀರ ಟೆಕ್ಸ್ ಟೈಲ್ ಹಾಗೂ ಮಹಾವೀರ ಸೂಪರ್ ಮಾರ್ಕೆಟ್ ಮಾಲೀಕ ಉದ್ಯಮಿ ಪ್ರಭಾಕರ ಹೆಗ್ಡೆ ವಿರುದ್ದ ಎಫ್ಐಆರ್ ದಾಖಲಾಗಿದೆ.
ತನ್ನ ಸೂಪರ್ ಮಾರ್ಕೇಟ್ನ ಬಿಲ್ಡಿಂಗ್ ತೋರಿಸೋದಾಗಿ ಕಾರಿನಲ್ಲಿ ಕರೆದೊಯ್ದಾಗ ಕಿರುಕುಳ ನೀಡಿದ್ದು ಈ ವೇಳೆ ಕಿರುಚಾಡಿ ಕಾರಿನಿಂದ ಹೊರಬಂದಿದ್ದಾರೆ. ಈ ವೇಳೆ ಬೈಕ್ನಲ್ಲಿ ಬಂದ ಯುವಕರು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ
ಸಂತ್ರಸ್ತ ಮಹಿಳೆಯಿಂದ ಲೈಂಗಿಕ ಕಿರುಕುಳದ ದೂರು ದಾಖಲಾಗುತ್ತಿದ್ದಂತೆ, ಉದ್ಯಮಿ ಪ್ರಭಾಕರ ಹೆಗ್ಡೆ ನಾಪತ್ತೆಯಾಗಿದ್ದಾರೆ. ಇದೀಗ ದೂರಿನ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರುವಂತ ಬೆಳ್ತಂಗಡಿ ಪೊಲೀಸರು, ಉದ್ಯಮಿ ಪ್ರಭಾಕರ ಹೆಗ್ಡೆ ಬಂಧನಕ್ಕಾಗಿ ಬಲೆ ಬೀಸಿದ್ದಾರೆ