ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಸ್ಥಳಿಯ ಅಭ್ಯರ್ಥಿಗಳ ಅವಕಾಶವನ್ನು ಕಾಂಗ್ರೇಸ್ ಕಸಿದುಕೊಂಡಿದೆ: ವೆಂಕಟ್ ದಂಬೆಕೋಡಿ

ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಸ್ಥಳಿಯ ಅಭ್ಯರ್ಥಿಗಳ ಅವಕಾಶವನ್ನು ಕಾಂಗ್ರೇಸ್ ಕಸಿದುಕೊಂಡಿದೆ: ವೆಂಕಟ್ ದಂಬೆಕೋಡಿ

ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಸ್ಥಳಿಯ ಅಭ್ಯರ್ಥಿಗಳಿಗೆ ಅವಕಾಶ ನೀಡದೆ ಬೇರೆ ಊರಿನ ಉಧ್ಯಮಿಯೊಬ್ಬರಿಗೆ ಅವಕಾಶ ನೀಡುವ ಮೂಲಕ, ಈ ಚುನಾವಣೆ ಜನಸಾಮಾನ್ಯ ಮತ್ತು ಧನಿಕರ ನಡುವಿನ ಸ್ಫರ್ಧೆಯಾಗಿದೆ ಎಂದು ಬಿಜೆಪಿ ಚುನಾವಣಾ ನಿರ್ವಹಣ ಸಮಿತಿಯ ಸಂಚಾಲಕ ವೆಂಕಟ್ ದಂಬೆಕೋಡಿ ಹೇಳಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಪರಿಷಿಷ್ಟ ಜಾತಿ ಯವರನ್ನು ಪರಿಗಣನೆಗೆ ತೆಗೆದು ಕೊಳ್ಳದೆ ಹೊರ ಭಾಗದ ಅಭ್ಯರ್ಥಿ ಯನ್ನು ನಿಲ್ಲಿಸಿ ಅವರ ಪರವಾಗಿ ಸ್ವತಹ ಪರಿಷಿಷ್ಟ ಜಾತಿಯವರಾಗಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಚಾರಕ್ಕೆ ಬರುತ್ತಿರುವುದು ತಿಳಿದು ಬಂದಿದೆ, ಇದು ಪರಿಷಿಷ್ಟ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಹೇಳಿದರು

ಸುಳ್ಯದಲ್ಲಿ ಕಳೆದ ಬಾರಿ 26000 ಮತಗಳಿಂದ ಗೆದ್ದಿದ್ದೆವು ಈ ಬಾರಿಯ ಜನಸ್ಪಂದನೆ ನೋಡಿದರೆ 40000 ಗಳ ಭಾರೀ ಅಂತರದಿಂದ ಗೆಲುವು ಸಾದಿಸುತ್ತೇವೆ, ಈಗಾಗಲೆ ಪಕ್ಷದ ಅಭ್ಯರ್ಥಿ ಪ್ರವಾಸ ಕೈಗೊಂಡಿದ್ದು ನಗರದ ಪ್ರಮುಖ ಮನೆಗಳನ್ನು ಭೇಟಿ ಮಾಡಲಾಗಿದೆ ಈ ಮೂಲಕ ಎ. 26 ಕ್ಕೆ ಕಾರ್ಯಕರ್ತರ ಸಜ್ಜುಗೊಳಿಸಿಎ. 30 ರಂದು ಮಹಾ ಸಂಪರ್ಕ ಅಭಿಯಾನ ನಡೆಸಲಾಗುತ್ತದೆ, ಅಂಗಾರರ ಅವಧಿಯಲ್ಲಿ ಮಾಡಿದ ಅಭಿವೃದ್ದಿಕಾರ್ಯಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮತದಾರರಲ್ಲಿ ಹುರುಪು ತುಂಬಲು ಎ. 25 ಅಥವಾ 26 ರಂದು ಬಿಜೆಪಿ ರಾಷ್ಟ್ರೀಯ ಯುವ ಘಟಕದ ಕಾರ್ಯದರ್ಶಿವ ಪಂಕಜ್ ಮುಂಡೆ ಸುಳ್ಯಕ್ಕೆ ಬರುವ ಸಾದ್ಯತೆ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ನ .ಪಂ ಅದ್ಯಕ್ಷ ವಿನಯಕುಮಾರ್ ಕಂದಡ್ಕ, ಮಾಜಿ ತಾ ಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಜಿನ್ನಪ್ಪ ಸುಳ್ಯ, ಸುನಿಲ್ ಕೇರ್ಪಳ ಮೊದಲಾದವರಿದ್ದರು.

ರಾಜ್ಯ