
ಕರ್ನಾಟಕ ರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಪರವಾನಿಗೆ ಹೊಂದಿದ
ಆಯುಧಗಳನ್ನು ಠೇವಣಿಯಿಂದ ವಿನಾಯಿತಿ ನೀಡದ ಜಿಲ್ಲಾ ಮಟ್ಟದ ಸೀನಿಂಗ್ ಸಮಿತಿಯ ಆದೇಶವನ್ನು
ಮರುಪರಿಶೀಲಿಸಬೇಕಾಗಿ ವಿನಂತಿಸುವಂತೆ ಸುಳ್ಯ ಬ್ಲಾಕ್ ಗಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ್ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ.ಈಗಾಗಲೇ ತಾಲೋಕಿನಿಂದ ಅರ್ಜಿ ಸಲ್ಲಿ ಶೇ40 ಮಂದಿಗೆ ಮಾತ್ರ ವಿನಾಯಿತಿ ದೊರೆತಿದೆ.
ಪೂಮಾಲೆ ರಕ್ಷಿತಾರಣ್ಯದ ಬುಡದಲ್ಲಿ ವಾಸಿಸುವ ಉಬರಡ್ಕ ಮಿತ್ತೂರು, ಮರ್ಕಂಜ, ನೆಲ್ಲೂರು ಕೆಮ್ರಾಜೆ
ಗ್ರಾಮದ ಯಾವುದೇ ವ್ಯಕ್ತಿಗೆ ವಿನಾಯಿತಿ ನೀಡದಿರುವುದು ಬಹಳ ಬೇಸರವುಂಟು ಮಾಡಿದೆ. ಹಾಗೂ ಈ ಭಾಗದ ರೈತರಿಗೆ ಮಾಡಿದ ಅನ್ಯಾಯವಾಗಿದೆ.
ಆದುದರಿಂದ ಈ ಭಾಗದ ರೈತರ ಅರ್ಜಿಯನ್ನು ಮರು ಪರಿಶೀಲಿಸಬೇಕು ಎಂದು ಸುಳ್ಯ ತಾಲೋಕು ರೈತರ ಪರವಾಗಿ ಆಗ್ರಹ ವ್ಯಕ್ತಪಡಿಸಿದ್ದಾರೆ.

