
ಸುಳ್ಯ ತಾಲೋಕಿನ ಅಡ್ಪಂಗಾಯ ಕಾಲೋನಿಯಲ್ಲಿ ಮತದಾನ ಭಹಿಷ್ಕಾರದ ಬ್ಯಾನರ್ ಅಳವಡಿಸಿ ಇಲ್ಲಿನ ನಿವಾಸಿಗಳು ಅಸಮದಾನ ವ್ಯಕ್ತ ಪಡಿಸಿದ್ದಾರೆ. ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದರೂ ವಾಸಸ್ಥಳಕ್ಕೆ ಪಹಣಿ ಮಾಡಿಕೊಟ್ಟಿಲ್ಲ ಎಂದು ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿ ಬ್ಯಾನರ್ ಅಳವಡಿಸಿದ್ದಾರೆ ಅಜ್ಜಾವರ ಗ್ರಾಮದ ಅಡ್ಪಂಗಾಯ ಕಾಲೋನಿಯ
ಮಹಾಮ್ಮಾಯಿ ದೇವಸ್ಥಾನ ಹಾಗೂ ಅಲ್ಲಿನ ಪ.ಜಾತಿ ಕಾಲೋನಿಯಲ್ಲಿ ವಾಸಿಸುತ್ತಿರುವ 20 ಕುಟುಂಬದವರ ಮನೆಯ ಅಡಿಸ್ಥಳ ಇದುವರೆಗೂ ಪಹಣಿಯಾಗಿರುವುದಿಲ್ಲ. ಅರ್ಜಿ ಸಲ್ಲಿಸಿದರೂ ವಿಳಂಬ ನೀತಿ ಅನುಸರಿಸುತ್ತಿರುವ ಆಡಳಿತ ಮತ್ತು ನಿರ್ಲಕ್ಷ್ಯ ಧೋರಣೆ ವಹಿಸುತ್ತಿರುವ ಜನಪ್ರತಿನಿಧಿಗಳ ವಿರುದ್ಧ ಮತದಾನ ಬಹಿಷ್ಕರಿಸಿ ಹೋರಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.


