ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಇಂದು ಅಭ್ಯರ್ಥಿತನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.



ನಾಮಪತ್ರ ಸಲ್ಲಿಸುವ ಮೊದಲು ಮಠoತಬೆಟ್ಟು ಶ್ರೀ ಮಹಿಷಮರ್ಧಿನಿ ಮತ್ತು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಬೆಳಿಗ್ಗೆ 9.30 ಕ್ಕೆ ದರ್ಬೆ ಸರ್ಕಲ್ ನಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಮತ್ತು ಅಭಿಮಾನಿಗಳೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ತೆರಳಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ನಾಯಕರಾದ ಕಾವು ಹೇಮನಾಥ್ ಶೆಟ್ಟಿ, ಶಕುಂತಲಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ವಿಶ್ವನಾಥ ರೈ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ರಾಜಾರಾಮ್ ಸೇರಿದಂತೆ ಪ್ರಮಖ ನಾಯಕರು ಭಾಗವಹಿಸಿದ್ದರು, ಟಿಕೇಟ್ ಹಂಚಿಕೆಯಲ್ಲಿ ಅಸಮದಾನ ಗೊಂಡಿದ್ದ , ಮತ್ತು ಆಕಾಂಕ್ಷಿಗಳೆಲ್ಲ ಅಶೋಕ್ ಕುಮಾರ್ ಜೊತೆ ಸಾಥ್ ನೀಡಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ತಯಾರಿ ನಡೆಸಿದ್ದಾರೆ. ಈ ಮೂಲಕ ಪಕ್ಷದಲ್ಲಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

