ರಾಜ್ಯ ರಾಜಕೀಯದಲ್ಲಿ ಪುಟಿದೆದ್ದ ಪ್ರಜಾಕಿಯದ ಅಲೆ:ಜನ ನಿಜವಾಗಿಯೂ ಬದಲಾವಣೆ ಬಯಸಿದ್ದಾರಾ..?ಯಾರಿಗಿದೆ ಮತದಾರರ ಒಲವು..?.

ರಾಜ್ಯ ರಾಜಕೀಯದಲ್ಲಿ ಪುಟಿದೆದ್ದ ಪ್ರಜಾಕಿಯದ ಅಲೆ:
ಜನ ನಿಜವಾಗಿಯೂ ಬದಲಾವಣೆ ಬಯಸಿದ್ದಾರಾ..?
ಯಾರಿಗಿದೆ ಮತದಾರರ ಒಲವು..?.

2023 ರ ಚುನಾವಣೆಯ ಹೊಸ್ತಿಲಲ್ಲಿ ನಟ ನಿರ್ದೇಶಕ ರಿಯಲ್ ಸ್ಟಾರ್ ಹುಟ್ಟು ಹಾಕಿರುವ ಪ್ರಜಾಕಿಯದ ಚಿಂತನೆ ಮತದಾರರ ಹೃದಯದ ಆಲೋಚನೆಗಳ ಖದ ತಟ್ಟುವ ಕೆಲಸ ಮಾಡುತ್ತಿರುವು ಸತ್ಯ…,

ಇದು ರಾಜಕೀಯವನ್ನು ತನ್ನ ಉಧ್ಯಮಮವಾಗಿ ಬಳಸಿ ಬೆಳೆಸಿ ಬದುಕು ಉಳಿಸಿಕೊಳ್ಳುತಿರುವ ರಾಜಕಾರಣಿಗಳಿಗೆ ಬಿಸಿ ತುಪ್ಪವಾಗಿ ಪರಿಗಣಿಸಿದೆ, ಪ್ರಜಾಕಿಯದಲ್ಲಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕ, ಪ್ರಜೆಗಳೇ ಸರ್ವಾಧಿಕಾರಿಯಾಗಿರುವ , ಸಾಮಾನ್ಯ ಜನವೂ ಅಭ್ಯರ್ಥಿಯಾಗ ಬಲ್ಲ, ಯಾವುದೇ ಆಮಿಷಗಳನ್ನು ಒಡ್ಡದೆ ,ಹಣಖರ್ಚು ಮಾಡದೆ, ಚುನಾವಣೆ ಎದುರಿಸುವ ನಿಯಮ ಮತ್ತು ನೂತನ ಆಲೋಚನೆ ಯವ ಜನತೆಯ ಮನ ಗೆಲ್ಲುತ್ತಿರುವುದು, ಸದಾ ಸಮಾಜವನ್ನು ಒಡೆದು ಆಳುತ್ತಿರುವ ರಾಜಕಾರಣಿಗಳಿಗೆ ತೀವ್ರ ಮುಖ ಭಂಗವಾಗುತ್ತಿರುವುದು ಗುಪ್ತವಾಗಿ ಉಳಿದಿಲ್ಲ, ಈಗಿರುವ ಎಲ್ಲಾ ಪಕ್ಷಗಳ ಆಡಳಿತ ಕಂಡಿರುವ ಯುವ ಜನತೆ ರಾಜಕೀಯ ವ್ಯಕ್ತಿಗಳ ಮೇಲೆ , ಅವರು ನೀಡುತ್ತಿರುವ ಭರವಸೆಗಳ ಮೇಲೆ , ನಿಧಾನವಾಗಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ..ಪಕ್ಷಗಳ ಕಾರ್ಯ ಚಟುವಟಿಕೆಯಲ್ಲಿ ಹಿಂದಿನ ರೀತಿ ಕಾರ್ಯಕರ್ತರ ಕಾರ್ಯ ಚಟುವಟಿಕೆಗಳು ಕಂಡು ಬರುತ್ತಿಲ್ಲ , ಪಕ್ಷಕ್ಕಾಗಿ ಜೀವ ತೇಯುವ ಕಾರ್ಯಕರ್ತರ ದುಖಃದಲ್ಲಿ ನಾಯಕರು ಭಾಗಿಯಾಗದೇ ನಾಟಕವಾಡುವುದನ್ನು ಜನತೆ ಇದೀಗ ಸುಲಭವಾಗಿ ಅರಿತುಕೊಂಡಿದ್ದಾರೆ,ಮತ್ತು ಅದನೆಲ್ಲಾ ಅರಗಿಸಿಕೊಂಡ ಯುವ ಮತದಾರರು ಇಡೀ ರಾಜಕೀಯ ವ್ಯವಸ್ಥೆಯೇ ಬದಲಾಗಬೇಕು, ಈಗಿನ ಡಿಜಿಟಲ್ ಯುಗದಲ್ಲಿ ಪಾರದರ್ಶಕ ಚುನಾವಣೆಯ ಜೊತೆ ಪಾರದರ್ಶಕ ಆಡಳಿತ ಬರಬೇಕು.ಕೆಲಸ ಮಾಡದ ಎಂ.ಪಿ ಎಂ ಎಲ್ .ಎ ಗಳನ್ನು ಪ್ರಶ್ನೆ ಮಾಡುವ ಮತ್ತು ಕೆಳಗಿಳಿಸುವ ವ್ಯವಸ್ಥೆ ಆಗಬೇಕು,ಲಂಚ ಬ್ರಷ್ಟಾಚಾರ ರಹಿತ ಆಡಳಿತ ಬರಬೇಕು ಎಂದು ಜನ ಬಯಸಿದ್ದಾರೆ, ಇದು ಇತ್ತೀಚೆಗೆ ರಾಜ್ಯದ ಖಾಸಗಿ ಚಾನೆಲ್ ನಡೆಸಿದ ಪ್ರಜಾಕಿಯ ಸಂಸ್ಥಾಪಕ ಉಪೇಂದ್ರ ಜೊತೆಗಿನ ಸಂದರ್ಶನ ಮತ್ತು ಅವರು ನೀಡಿದ ಉತ್ತರ ಜನರ ಆಲೋಚನೆಗಳ ಕದ ತಟ್ಟಿದೆ.. ಪ್ರಶ್ನೇ ಎತ್ತಿದವರೇ ತಾವು ಕೇಳಿದ ಪ್ರಶ್ನೆಯಲ್ಲಿ ಅಡಗಿರುವ ಉತ್ತರ ಅರಿತುಕೊಂಡರಲ್ಲದೆ ಇದು ರಾಜ್ಯದ ಜನರಿಗೂ ಉತ್ತರ ಸಿಕ್ಕಿದಂತಾಗಿದೆ.. ರಾಜ್ಯದಾದ್ಯಂತ ಹರಿದಾಡುತ್ತಿದೆ.. ಅಂತು ಪ್ರಜಾಕಿಯ ಚಿಂತನೆ ಜನರಲ್ಲಿ ಹೊಸ ಆಲೋಚನೆ ಹುಟ್ಟುಹಾಕಿರುವ ಜೊತೆಯಲ್ಲಿ ರಾಜ್ಯ ರಾಜಕೀಯದಲ್ಲಿ ರಾಜಕಾರಣಿಗಳಿಗೆ ಇದು ತಮ್ಮನ್ನು ತಾವು ಬದಲಾಯಿಸಿಕೊಳ್ಳಲು ಪರ್ವಕಾಲ ಎಂದರೂ ತಪ್ಪಾಗಲಾರದು.. ಇನ್ನೂ ನೀವು ಬದಲಾಗದಿದ್ದರೆ ಜನ ನಿಮ್ಮನ್ನೇ ಬದಲಾಯಿಸಿ ಬಿಟ್ಟಾರು….. ಹುಷಾರ್..

ರಾಜ್ಯ