
ಲಕ್ಷಾಂತರ ರೂ ಮೌಲ್ಯದ ಮಾದಕ ವಸ್ತುಗಳ ಸಹಿತ ಆರೋಪಿಗಳನ್ನು ಕೋಣಾಜೆ ಪೊಲೀಸರ ತಂಡ ವಶಕ್ಕೆ ಪಡೆದುಕೊಂಡಿದೆ.27 ಲಕ್ಷ ಮೌಲ್ಯದ ಮಾದಕ ದ್ರವ್ಯ ಗಾಂಜಾ ಸಹಿತ ಸಾಗಾಟ ಮಾಡುತ್ತಿದ್ದವರನ್ನು ನೆಲಪದವು ಎಂಬಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರೆಲ್ಲರು ಕೇರಳ ರಾಜ್ಯದವರಾಗಿದ್ದು, ಕಾಸರಗೋಡು, ಮಂಜೇಶ್ವರ, ಹೊಸ ಗ್ರಾಮ ನಿವಾಸಿ ಅಬೂಬಕರ್ ಸಿದ್ದಿಕ್, ಕುಂಬ್ಳೆ ನಿವಾಸಿ ಅಖಿಲ್ ಎಮ್, ಉದ್ಯಾವರ ಗ್ರಾಮ ನಿವಾಸಿ ಹೈದರ್ ಆಲಿ, ಎಂಬವರು ಬಂಧಿತ ಆರೋಪಿಗಳು.
ಬಂಧಿತರಿಂದ ಒಟ್ಟು 32,07,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಆಯುಕ್ತರಾದ ಶಶಿಕುಮಾರ್, ಐ.ಪಿ.ಎಸ್ ಹಾಗೂ ಅಂಶು ಕುಮಾರ್, ಉಪ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುಸಂ ಹಾಗೂ ದಿನೇಶ್ ಕುಮಾರ್, ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಸಹಾಯಕ ಪೊಲೀಸ್ಆಯುಕ್ತರಾದ ಧನ್ಯ ನಾಯಕ್ ರವರ ಮಾರ್ಗದರ್ಶನದಲ್ಲಿ, ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ರವರ ನೇತೃತ್ವದಲ್ಲಿ, ಪಿ.ಎಸ್.ಐ ರವರಾದ ಶರಣಪ್ಪ ಭಂಡಾರಿಯವರು ಸಿಬ್ಬಂದಿದಾರರಾದ ಶೈಲೇಂದ್ರ, ನವೀನ್, ಎಂಟ್ ರೊಡ್ರಿಗಸ್, ಸುರೇಶ್, ಬರಮ್ ಬಡಿಗೇರ, ಹೇಮಂತ್, ಪುರುಷಕ್ರಮ, ದೇವರಾಜ್, ಶಿವ ಕುಮಾರ್, ದೀಪಕ್, ಸುನೀತಾ, ಮಹಮ್ಮದ್ ಗೌಸ್ ಹಾಗೂ ತಾಂತ್ರಿಕ ವಿಭಾಗದ ಮನೋಜ್ ರವರೊಂದಿಗೆ ಕಾರ್ಯಚರಣೆ ನಡೆಸಿದ್ದಾರೆ.

