ಡಾ. ಕೆ ವಿ.ರೇಣುಕಾಪ್ರಸಾದ್ ನಿವಾಸದಲ್ಲಿ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಅನುಗ್ರಹ ಸಂದೇಶ-ಭಕ್ತರಿಂದ ಪಾದಪೂಜೆ.

ಡಾ. ಕೆ ವಿ.ರೇಣುಕಾಪ್ರಸಾದ್ ನಿವಾಸದಲ್ಲಿ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಅನುಗ್ರಹ ಸಂದೇಶ-ಭಕ್ತರಿಂದ ಪಾದಪೂಜೆ.

ಸುಳ್ಯ ತಾಲೋಕಿನಾದ್ಯಂತ ಐಕ್ಯತಾ ಸಂದೇಶ ನೀಡಲು ಗ್ರಾಮ ವಾಸ್ತವ್ಯಕ್ಕಾಗಿ ಮೂರು ದಿನಗಳ ಪ್ರಾವಾಸ ಮಾಡಿದ ಆದಿಚುಂಚನಗಿರಿ ಮಹಾ ಮಠಾದಿಪತಿ ಡಾ.ಶ್ರೀ ನಿರ್ಮಲನಂದನಾಥ ಸ್ವಾಮೀಜಿಯವರು ಮತ್ತು ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಡಿ .22 ರಸಂಜೆ ಡಾ. ಕೆ ವಿ ರೇಣುಕಾ ಪ್ರಸಾದ್ ನಿವಾವಸಕ್ಕೆ ಬೇಟಿಮಾಡಿ ಆಶೀರ್ವಾದವನ್ನು ನೀಡಿದರು ಈ ಸಂದರ್ಭದಲ್ಲಿ ಡಾ ಜ್ಯೋತಿರೇಣುಕಾಪ್ರಸಾದ್, ಡಾ. ಅಭಿಜ್ಞಾ, ಮೌರ್ಯ ಕೆ.ವಿ.ಜಿ ವಿದ್ಯಾ ಸಂಸ್ಥೆಗಳ ಸಿಬ್ಬಂದಿ ವರ್ಗ ಸ್ವಾಮೀಜಿಗಳನ್ನು ತುಳಸಿ ಮಾಲಾದಾರಣೆಯೊಂದಿಗೆ ಫಲ ಪುಷ್ಫದೊಂದಿಗೆ ಆಧರದಿಂದ ಬರಮಾಡಿಕೊಂಡರು,


ನಂತರ ಅನುಗ್ರಹ ಸಂದೇಶ ನೀಡಿದ ಸ್ವಾಮೀಜಿಯವರು ವೆಂಕಟರಮಣ ಗೌಡರಂತಹ ವ್ಯಕ್ತಿಗಳು ಹೆಚ್ಚಾಗಬೇಕು ಮನುಷ್ಯನ ಉದ್ದೇಶ ಸ್ಪಷ್ಟ ಇದೆ ಅದು ಮುಕ್ತಿ, ಮುಕ್ತಿ ಎಂದರೆ ತನ್ನನ್ನು ತಾನು ಅರಿಯುವ ಕ್ರಿಯೆ, ಧರ್ಮ ಜಾಗೃತಿಯಲ್ಲಿ ನಮ್ಮಲ್ಲಿರು ಕೊಳೆಯನ್ನು , ಮನಸ್ಸಿನ ಕಲ್ಮಶವನ್ನು ತೊಳೆದುಕೊಳ್ಳುವ ಅವಕಾಶವಿದೆ ಎಂದರು.ನಂತರ ಗುರುವಂದನೆ, ಪಾದಪೂಜೆಯನ್ನು ಶ್ರೀಗಳಿಗೆ ನೆರವೇರಿಸಲಾಯಿತು ಡಾ. ಕೆ ವಿ ರೇಣುಕಾಪ್ರಸಾದ್, ಡಾ ಜ್ಯೋತಿ ರೇಣುಕಾಪ್ರಸಾದ್, ಡಾ. ಅಭಿಜ್ಞಾ, ಹಾಗೂ ಮೌರ್ಯ ಹಾಗೂ ಸಿಬ್ಬಂದಿ ವರ್ಗಸೇರಿದಂತೆ

ನೂರಕ್ಕೂ ಮಿಕ್ಕಿದ ಭಕ್ತರು ಪಾದಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಲಿಬರಲ್ ಎಜ್ಯುಕೇಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ, ಕೆವಿಜಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳು ಹಾಗು ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಾದ ಮಾಧವ.ಬಿ.ಟಿ, ಪ್ರಸನ್ನ ಕಲ್ಲಾಜೆ, ದಿನೇಶ್ ಮಡ್ತಿಲ, ಭವಾನಿಶಂಕರ ಅಡ್ತಲೆ, ಯಶೋಧಾ ರಾಮಚಂದ್ರ, ಸುರೇಶ್.ಬಿ.ವಿ, ಜಯಪ್ರಕಾಶ್, ಚಿದಾನಂದ ಬಾಳಿಲ, ಡಾ.ಮೋಕ್ಷಾ ನಾಯಕ್, ಶಿವರಾಮ ಕೇರ್ಪಳ, ನಾಗೇಶ್ ಕೊಚ್ಚಿ ಮೊದಲಾದವರು ಗುರುವಂದನೆ ಸಲ್ಲಿಸಿದರು .

ಎ.ವಿ.ತೀರ್ಥರಾಮ, ಡಿ ವಿ ಸತೀಶ್, ತೇನನ ರಾಜೇಶ್,ಧನಂಜಯ ಅಡ್ಪಂಗಾಯ, ಎನ್.ಎ.ರಾಮಚಂದ್ರ, ಜಾಕೆ ಮಾಧವ ಗೌಡ, ಎಸ್.ಎನ್.ಮನ್ಮಥ, ನಿತ್ಯಾನಂದ‌ ಮುಂಡೋಡಿ, ಭರತ್ ಮುಂಡೋಡಿ, ಡಾ.ಲೀಲಾಧರ್ ಡಿ.ವಿ., ಡಿ ಟಿ ದಯಾನಂದ,ಹರೀಶ್ ಕಂಜಿಪಿಲಿ, ಮೋಹನ್ ರಾಮ್ ಸುಳ್ಳಿ, ಚಂದ್ರಾ ಕೋಲ್ಚಾರ್, ಪಿ.ಸಿ.ಜಯರಾಮ, ವೆಂಕಟ್ ದಂಬೆಕೋಡಿ, ಸಂತೋಷ್ ಜಾಕೆ, ಕೃಷ್ಣಪ್ರಸಾದ್ ಮಡ್ತಿಲ, ಸಂತೋಷ್ ಕುತ್ತಮೊಟ್ಟೆ, ಸುನಿಲ್ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು

ಗುತ್ಯಮ್ಮ ದೇವಿ ಮತ್ತು ಸಪರಿವಾರ ಕ್ಷೇತ್ರಕ್ಕೆ ಭೇಟಿ.

ಕಾಂತಮಂಗಲ ಡಾ. ಕೆ. ವಿ ರೇಣುಕಾಪ್ರಸಾದ್ ನಿವಾಸದ ಸಮೀಪದಲ್ಲಿ ಸ್ಥಾಪನೆಯಾಗಿರುವ ಗುತ್ಯಮ್ಮ ದೇವಿ ಮತ್ತು ಸಪರಿವಾರ ದೇವಸ್ಥಾನಕ್ಕೆ ಆದಿಚುಂಚನಗಿರಿ ಮಠದ ಸ್ವಾಮೀಜಿಯವರು ಬೇಟಿಮಾಡಿದರು ನಂತರ


ಕುರುಂಜಿಯ ಶ್ರೀ ಗುತ್ಯಮ್ಮ ದೇವಿ ಮತ್ತು ಸಪರಿವಾರ ಕ್ಷೇತ್ರದಲ್ಲಿ ಪೂಜೆ ನೆರವೇರಿಸಿದರು. ಡಾ ಕೆ. ವಿ ರೇಣುಕಾ ಪ್ರಸಾದ್ ತಮ್ಮ ಸ್ವಂತ ಇಚ್ಚಾಶಕ್ತಿಯಿಂದ ಸಂಪೂರ್ಣ ಶಿಲೆಯಲ್ಲಿ ನಿರ್ಮಾಣಮಾಡಿರುವ ಸುಂದರ, ಹಾಗೂ ಪ್ರಶಾಂತ ವಾತವರಣದಲ್ಲಿ ಸಾನಿಧ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ