ಬೈಂದೂರು ಉತ್ಸವ 2026: ಸಮಾಜ ಸೇವೆಯ ಬೆಳಕು ಚೆಲ್ಲಿದ ‘ಸೇವಾಭಾರತಿ’ ತಂಡ

ಬೈಂದೂರು ಉತ್ಸವ 2026: ಸಮಾಜ ಸೇವೆಯ ಬೆಳಕು ಚೆಲ್ಲಿದ ‘ಸೇವಾಭಾರತಿ’ ತಂಡ

ಬೈಂದೂರು: ಸ್ಥಳೀಯ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ವಿಶಿಷ್ಟ ಪರಿಕಲ್ಪನೆಯಡಿ ಆಯೋಜಿಸಲಾಗಿದ್ದ ಅದ್ಧೂರಿ ‘ಬೈಂದೂರು ಉತ್ಸವ – 2026’ ಕಾರ್ಯಕ್ರಮದಲ್ಲಿ ಸೇವಾಭಾರತಿ ತಂಡ ಸಕ್ರಿಯವಾಗಿ ಭಾಗವಹಿಸಿ ಸಾರ್ವಜನಿಕರ ಗಮನ ಸೆಳೆಯಿತು.

ಸೇವಾ ಕಾರ್ಯಗಳ ಕುರಿತು ಜಾಗೃತಿ​ ಉತ್ಸವದ ಆವರಣದಲ್ಲಿ ಸೇವಾಭಾರತಿ ಸಂಸ್ಥೆಯ ವತಿಯಿಂದ ವಿಶೇಷ ಮಳಿಗೆಯನ್ನು ತೆರೆಯಲಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯು ಕೈಗೊಳ್ಳುತ್ತಿರುವ ವಿವಿಧ ಸಾಮಾಜಿಕ ಯೋಜನೆಗಳು, ಅಂಗವಿಕಲರ ಪುನರ್ವಸತಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಸೇವಾ ಕಾರ್ಯಗಳ ಬಗ್ಗೆ ಜನರಿಗೆ ಸಮಗ್ರ ಮಾಹಿತಿ ನೀಡಲಾಯಿತು. ಸಂಸ್ಥೆಯ ವಾರ್ಷಿಕ ವರದಿ ಹಾಗೂ ಕರಪತ್ರಗಳನ್ನು ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಲಾಯಿತು.

​ಶ್ರೀ ಕೆ. ವಿನಾಯಕ ರಾವ್ ಅವರಿಗೆ ಸನ್ಮಾನ ಇದೇ ಸಂದರ್ಭದಲ್ಲಿ ಸೇವಾಭಾರತಿ ಸಂಸ್ಥೆಯ ಖಜಾಂಚಿ ಹಾಗೂ ‘ಸೇವಾಧಾಮ’ದ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಅವರನ್ನು ಅವರ ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಗುರುತಿಸಿ ಬೈಂದೂರು ಉತ್ಸವದ ವೇದಿಕೆಯಲ್ಲಿ ಗೌರವಿಸಲಾಯಿತು.

ಸೇವಾಭಾರತಿ ಸಂಸ್ಥೆಯ ಪರವಾಗಿ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಉತ್ಸವದ ಎಲ್ಲಾ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿವರ್ಗ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಪ್ರಾದೇಶಿಕ ರಾಜ್ಯ