ಫೋರ್ಟಿಸ್ ತೆಕ್ಕೆಗೆ ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆ: 430 ಕೋಟಿ ರೂ. ಮೊತ್ತದ ಬೃಹತ್ ಡೀಲ್

ಫೋರ್ಟಿಸ್ ತೆಕ್ಕೆಗೆ ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆ: 430 ಕೋಟಿ ರೂ. ಮೊತ್ತದ ಬೃಹತ್ ಡೀಲ್

ನವದೆಹಲಿ/ಬೆಂಗಳೂರು: ಸಿಲಿಕಾನ್ ಸಿಟಿಯ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬೆಳವಣಿಗೆಯೊಂದು ನಡೆದಿದೆ. ಬೆಂಗಳೂರಿನ ಯಶವಂತಪುರದಲ್ಲಿರುವ ಖ್ಯಾತ ‘ಪೀಪಲ್ ಟ್ರೀ’ ಆಸ್ಪತ್ರೆಯನ್ನು ಖರೀದಿಸುವುದಾಗಿ ಫೋರ್ಟಿಸ್ ಹೆಲ್ತ್‌ಕೇರ್ ಶನಿವಾರ ಘೋಷಿಸಿದೆ. ಒಟ್ಟು 430 ಕೋಟಿ ರೂಪಾಯಿಗಳ ಈ ವ್ಯವಹಾರವು ವೈದ್ಯಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಪೀಪಲ್ ಟ್ರೀ ಆಸ್ಪತ್ರೆಯು ಟಿಎಂಐ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್ (TMI Healthcare Pvt Ltd) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ 100 ಪ್ರತಿಶತ ಷೇರುಗಳನ್ನು ಖರೀದಿಸಲು ಫೋರ್ಟಿಸ್ ಸಹಿ ಹಾಕಿದೆ. ಫೋರ್ಟಿಸ್ ಸಂಸ್ಥೆಯ ಸಂಪೂರ್ಣ ಒಡೆತನದ ಅಂಗಸಂಸ್ಥೆಯಾದ ಇಂಟರ್ನ್ಯಾಷನಲ್ ಹಾಸ್ಪಿಟಲ್ ಲಿಮಿಟೆಡ್ (IHL) ಮೂಲಕ ಈ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ ಎಂದು ಕಂಪನಿ ತಿಳಿಸಿದೆ.

ಈ ಸ್ವಾಧೀನದ ಮೂಲಕ ಬೆಂಗಳೂರಿನ ಉತ್ತರ ಭಾಗದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಫೋರ್ಟಿಸ್ ಯೋಜಿಸಿದೆ. ಸದ್ಯ ಬೆಂಗಳೂರಿನ ವಿವಿಧೆಡೆ ಫೋರ್ಟಿಸ್ ಆಸ್ಪತ್ರೆಗಳಿದ್ದು, ಪೀಪಲ್ ಟ್ರೀ ಸೇರ್ಪಡೆಯಿಂದ ಸಂಸ್ಥೆಯ ಜಾಲ ಮತ್ತಷ್ಟು ವಿಸ್ತಾರವಾಗಲಿದೆ.

ಆರೋಗ್ಯ ಮತ್ತು ಸೌಂದರ್ಯ ರಾಜ್ಯ