ಅಹಮದಾಬಾದ್ (ಡಿ.19): ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ದಕ್ಷಿಣ ಆಫ್ರಿಕಾಗೆ 232 ರನ್ಗಳ ದೊಡ್ಡ ಗುರಿ ನಿಗದಿ ಮಾಡಿದೆ. ಹಾರ್ದಿಕ್ ಪಾಂಡ್ಯಾ ಅವರ ಸ್ಫೋಟಕ ಅರ್ಧಶತಕ ಮತ್ತು ತಿಲಕ್ ವರ್ಮಾ ಅವರ ಶ್ರೇಷ್ಟ 73 ರನ್ಗಳ ಇನಿಂಗ್ಸ್ ತಂಡದ ಮೊತ್ತವನ್ನು ಭಾರಿಯಾಗಿ ಹೆಚ್ಚಿಸಿತು.
ಭಾರತದ ಇನಿಂಗ್ಸ್ ಮಧ್ಯದಲ್ಲಿ ಸ್ವಲ್ಪ ನಿಧಾನಗೊಂಡಂತಿದ್ದಾಗ, ನಾಲ್ಕನೇ ವಿಕೆಟ್ಗೆ ಹಾರ್ದಿಕ್ ಪಾಂಡ್ಯಾ ಮತ್ತು ತಿಲಕ್ ವರ್ಮಾ ನಡುವಿನ 105 ರನ್ಗಳ ವೇಗದ ಜೊತೆಯಾಟ ಪಂದ್ಯದ ದಿಕ್ಕನ್ನೇ ತಿರುಗಿಸಿತು. ಕೇವಲ 44 ಬಾಲ್ಗಳಲ್ಲಿ ಈ ಜೋಡಿ ರನ್ಗಳನ್ನು ಸುರಿಸಿತು.
ಹಾರ್ದಿಕ್ ಪಾಂಡ್ಯಾ ಕೇವಲ 25 ಬಾಲ್ಗಳಲ್ಲಿ 63 ರನ್ಗಳನ್ನು ಸಿಡಿಸಿದರು. ಅವರ ಈ ಅರ್ಧಶತಕ 16 ಬಾಲ್ಗಳಲ್ಲಿ ಪೂರ್ಣಗೊಂಡಿದ್ದು, ಭಾರತೀಯ ಟಿ20 ಇತಿಹಾಸದಲ್ಲಿ ಎರಡನೇ ವೇಗದ ಅರ್ಧಶತಕ ಎಂಬ ದಾಖಲೆ ನಿರ್ಮಿಸಿತು. 2007ರಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಮಾಡಿದ 12 ಬಾಲ್ಗಳ ಅರ್ಧಶತಕ ಇನ್ನೂ ಮೊದಲ ಸ್ಥಾನದಲ್ಲಿದೆ. ಪಾಂಡ್ಯಾ ಅವರ ಇನಿಂಗ್ಸ್ನಲ್ಲಿ ಐದು ಸಿಕ್ಸರ್ಗಳು ಮತ್ತು ಐದು ಫೋರ್ಗಳು ಸೇರಿದ್ದವು.
ಮತ್ತೊಂದೆಡೆ ತಿಲಕ್ ವರ್ಮಾ ಆಕ್ರಮಣಕಾರಿ ಆಟವಾಡಿ 42 ಬಾಲ್ಗಳಲ್ಲಿ 73 ರನ್ ಗಳಿಸಿದರು. ಅವರ ಬ್ಯಾಟಿಂಗ್ನಲ್ಲಿ 10 ಫೋರ್ಗಳು ಮತ್ತು ಒಂದು ಸಿಕ್ಸರ್ ಕಂಡುಬಂದವು. ಮೈದಾನದ ಎಲ್ಲ ದಿಕ್ಕುಗಳಿಗೂ ಶಾಟ್ಗಳನ್ನು ಆಡಿದ ತಿಲಕ್, ತಂಡಕ್ಕೆ ಸ್ಥಿರತೆ ಮತ್ತು ವೇಗ ಎರಡನ್ನೂ ಒದಗಿಸಿದರು.ನಿಗದಿತ ಓವರ್ಗಳಲ್ಲಿ ಭಾರತ 232 ರನ್ ಗಳಿಸಿ, ದಕ್ಷಿಣ ಆಫ್ರಿಕಾಗೆ ಭಾರೀ ಸವಾಲಿನ ಗುರಿ ನೀಡಿದೆ.

