ಇಂದು ಕೃಷ್ಣನ ನಗರಿ ಉಡುಪಿಗೆ ಪ್ರಧಾನಿ ಮೋದಿ ಭೇಟಿ: ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿ

ಇಂದು ಕೃಷ್ಣನ ನಗರಿ ಉಡುಪಿಗೆ ಪ್ರಧಾನಿ ಮೋದಿ ಭೇಟಿ: ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿ

ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತಿಹಾಸ ಪ್ರಸಿದ್ಧ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ‘ಲಕ್ಷ ಕಂಠ ಗೀತಾ ಪಾರಾಯಣ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 1 ಲಕ್ಷ ಭಕ್ತರು, ವಿದ್ಯಾರ್ಥಿಗಳು, ವಿದ್ವಾಂಸರು ಹಾಗೂ ವಿವಿಧ ವರ್ಗದ ನಾಗರಿಕರು ಒಟ್ಟಾಗಿ ಶ್ರೀಮದ್ ಭಗವದ್ಗೀತೆಯನ್ನು ಸಾಮೂಹಿಕವಾಗಿ ಪಠಿಸುವ ಈ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಪ್ರಧಾನ ಮಂತ್ರಿಗಳು ತಮ್ಮ ಉಡುಪಿ ಭೇಟಿಯ ಸಂದರ್ಭದಲ್ಲಿ ಎರಡು ಮಹತ್ವದ ಯೋಜನೆಗಳನ್ನು ಉದ್ಘಾಟಿಸಿ, ಸಮರ್ಪಣೆ ಮಾಡಲಿದ್ದಾರೆ.

  • ಸುವರ್ಣ ತೀರ್ಥ ಮಂಟಪ ಉದ್ಘಾಟನೆ: ಶ್ರೀ ಕೃಷ್ಣ ದೇವರ ಸನ್ನಿಧಿಯ ಮುಂಭಾಗದಲ್ಲಿ ನಿರ್ಮಿಸಲಾಗಿರುವ ನೂತನ ಸುವರ್ಣ ತೀರ್ಥ ಮಂಟಪವನ್ನು ಪ್ರಧಾನಿಗಳು ಉದ್ಘಾಟಿಸಲಿದ್ದಾರೆ.
  • ಕನಕ ಕವಚ ಸಮರ್ಪಣೆ: ಕನಕದಾಸರಿಗೆ ಭಗವಾನ್ ಶ್ರೀ ಕೃಷ್ಣನು ದಿವ್ಯ ದರ್ಶನ ನೀಡಿದ ಪವಿತ್ರ ಕಿಂಡಿ ಎಂದೇ ನಂಬಲಾಗಿರುವ ಕನಕನ ಕಿಂಡಿಗೆ (Kanakana Kindi) ಕನಕ ಕವಚವನ್ನು (Kanaka Kavacha) ಸಮರ್ಪಿಸಲಿದ್ದಾರೆ.
ಧಾರ್ಮಿಕ ಪ್ರಾದೇಶಿಕ ರಾಜ್ಯ