ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನವೆಂಬರ್ 22ರಂದು ಪುದಿಯೋಡ್ಕಲ್

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನವೆಂಬರ್ 22ರಂದು ಪುದಿಯೋಡ್ಕಲ್

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ವಾರ್ಷಿಕ ಪುದಿಯೋಡ್ಕಲ್ ಕಾರ್ಯಕ್ರಮ ನವೆಂಬರ್ 22, 2025ರಂದು ಶನಿವಾರದಂದು ನಡೆಯಲಿದೆ.

ನವೆಂಬರ್ 16ರ ಆದಿತ್ಯವಾರ ಬೆಳಗ್ಗೆ 7.00ಕ್ಕೆ ಗೊನೆ ಮುಹೂರ್ತ ಜರುಗಲಿದೆ. ನವೆಂಬರ್ 22ರಂದು ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ವಯನಾಟ್ ಕುಲವನ್ ಸಪರಿವಾರ ದೈವಗಳಿಗೆ ಪುದಿಯೋಡ್ಕಲ್, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ.

ನವೆಂಬರ್ 23ರಂದು ಮಧ್ಯಾಹ್ನ 12.00ಕ್ಕೆ ಗುಳಿಗನ ಸಮ್ಮಾನ ಹಾಗೂ ಸಂಜೆ 6.30ರಿಂದ ಮರುಪುತ್ತರಿ, ಶ್ರೀ ಕೊರತ್ತಿಯಮ್ಮನಿಗೆ ಸಮ್ಮಾನ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.

ಪುದಿಯೋಡ್ಕಲ್ ಕಾರ್ಯಕ್ರಮಕ್ಕಾಗಿ ಹಸಿರುವಾಣಿ ಹಾಗೂ ನಗದು ಕಾಣಿಕೆಗಳನ್ನು ಸಲ್ಲಿಸಲು ಇಚ್ಚಿಸುವವರು, ಹೆಚ್ಚಿನ ಮಾಹಿತಿಗಾಗಿ 9449103572ನ್ನು ಸಂಪರ್ಕಿಸಬಹುದು.

ಧಾರ್ಮಿಕ