ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರು ಸಮರ್ಪಿಸಿದ 18 ಅಡಿ ಎತ್ತರದ ಬೆಳ್ಳಿ ರಥದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಪ್ರಥಮ ಬೆಳ್ಳಿ ರಥೋತ್ಸವ ಸೇವೆಯು ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರಿಂದ ಸೇವಯಗಿ ಇಂದು ನಡೆಯಿತು.

ಪಲ್ಲಕ್ಕಿ ಉತ್ಸವದ ಬಳಿಕ ಬೆಳ್ಳಿ ರಥೋತ್ಸವ ನಡೆಯಿತು.ಈ ಪ್ರಥಮ ಬೆಳ್ಳಿ ರಥೋತ್ಸವ ಕಣ್ತುಂಬಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.

