ದೆಹಲಿ: ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರೊಂದಿಗೆ 2026-27ರ ಕೇಂದ್ರ ಬಜೆಟ್ಗಾಗಿ ಮೊದಲ ಪೂರ್ವ ಸಲಹಾ ಸಭೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಇಂದು ದೆಹಲಿಯಲ್ಲಿ ನಡೆಯಿತು.

ಮುಂದಿನ ಬಜೆಟ್ ರೂಪುರೇಷೆ ಕುರಿತಾಗಿ ವಿವಿಧ ಆರ್ಥಿಕ ಕ್ಷೇತ್ರಗಳ ನಿಪುಣರು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಸಭೆಯಲ್ಲಿ ಹಂಚಿಕೊಂಡರು. ಬಜೆಟ್ ತಯಾರಿಕೆಗೆ ಮುನ್ನ ವಿವಿಧ ಹಂತಗಳಲ್ಲಿ ಇಂತಹ ಸಲಹಾ ಸಭೆಗಳನ್ನು ನಡೆಸಲಾಗುವುದು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.


