ಕೆವಿಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಡಾ ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರು ಸಮರ್ಪಿಸಿದ 18 ಅಡಿ ಎತ್ತರದ ಚಿನ್ನದ ಕಳಶ ಸಹಿತ ಬೆಳ್ಳಿ ರಥದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ವಿರಾಜಮಾನನಾಗಲು ಇನ್ನೂ ಒಂದು ದಿನ ಮಾತ್ರ ಬಾಕಿ. ನಾಳೆ ಅಂದರೆ ನವಂಬರ್ 10ರಂದು ರಾತ್ರಿ ಮೊದಲ ಬೆಳ್ಳಿ ರಥೋತ್ಸವ ನಡೆಯಲಿದೆ.


ಇಂದು ಸಂಜೆಯಿಂದಲೇ ಸಕಲ ಪೂಜಾ ವಿಧಾನಗಳು ನಡೆಯುತ್ತದೆ. ನಾಳೆ ಮಧ್ಯಾಹ್ನ ಅಧಿಕೃತವಾಗಿ ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರಿಂದ ಬೆಳ್ಳಿ ರಥ ಸಮರ್ಪಣೆಯಾಗಲಿದೆ. ನಂತರ ರಾತ್ರಿ ಅದ್ದೂರಿಯಾಗಿ ಮೊದಲ ಬೆಳ್ಳಿ ರಥೋತ್ಸವ ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರ ಸೇವೆಯಾಗಿ ನಡೆಯಲಿದೆ.

ಈಗಾಗಲೇ ಮೊನ್ನೆ ನವಂಬರ್ 4 ರಂದು ಕೋಟೇಶ್ವರದಿಂದ ಹೊರಟು ಭವ್ಯ ಮೆರವಣಿಗೆಯೊಂದಿಗೆ ನವಂಬರ್ 5ರಂದು ಸುಬ್ರಹ್ಮಣ್ಯ ತಲುಪಿದ ಬೆಳ್ಳಿ ರಥಕ್ಕೆ ರಜತ ಗ್ರಹ ನಿರ್ಮಾಣವಾಗಿದ್ದು ಪ್ರಾಯೋಗಿಕ ರಥದ ಚಾಲನೆ ಕೂಡ ನಡೆದಿದೆ. ನಾಳಿನ ರಥೋತ್ಸವದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.


