Rashtriya Ekta Diwas 2025: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿ – ಪ್ರಧಾನಿ ಮೋದಿಯಿಂದ ಗೌರವ ನಮನ

Rashtriya Ekta Diwas 2025: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿ – ಪ್ರಧಾನಿ ಮೋದಿಯಿಂದ ಗೌರವ ನಮನ

ಗುಜರಾತ್,(ಅ 31): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಏಕತಾ ದಿನ (Rashtriya Ekta Diwas 2025) ಕಾರ್ಯಕ್ರಮವನ್ನು ಏಕತಾ ನಗರದಲ್ಲಿ ಭವ್ಯವಾಗಿ ಮುನ್ನಡೆಸಿದರು.

ದಿನದ ಆರಂಭದಲ್ಲಿ ಅವರು “ಸ್ಟ್ಯಾಚ್ಯೂ ಆಫ್ ಯೂನಿಟಿಗೆ” ಪುಷ್ಪಾರ್ಪಣೆ ಮಾಡಿ, ರಾಷ್ಟ್ರ ಏಕತಾ ಪ್ರಮಾಣವನ್ನು ಸ್ವೀಕರಿಸಿದರು. ಲಕ್ಷಾಂತರ ನಾಗರಿಕರು ದೇಶದಾದ್ಯಂತ ಏಕತಾ ಪ್ರಮಾಣ ಸ್ವೀಕರಿಸುವ ಮೂಲಕ ರಾಷ್ಟ್ರದ ಒಗ್ಗಟ್ಟಿನ ಸಂಕಲ್ಪವನ್ನು ಮತ್ತೊಮ್ಮೆ ಘೋಷಿಸಿದರು.

🔶 “ಏಕತೆಯೇ ಭಾರತದ ಶಕ್ತಿ” – ಪ್ರಧಾನಿ ಮೋದಿ

ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಮೋದಿ, – “ವಿಕಸಿತ ಭಾರತ ಕನಸನ್ನು ನನಸು ಮಾಡಲು ಪ್ರತಿ ನಾಗರಿಕರು ರಾಷ್ಟ್ರದ ಪ್ರಗತಿಗೆ ತಾವು ಸಮರ್ಪಿಸಿಕೊಳ್ಳಬೇಕು. ಭಾರತದಲ್ಲಿ ವೈವಿಧ್ಯತೆಯೇ ಏಕತೆಯ ಶಕ್ತಿ. ಇದು ಸರ್ದಾರ್ ಪಟೇಲ್ ಅವರ ಕನಸಿನ ಭಾರತ” ಎಂದು ಹೇಳಿದರು.

ಅವರು 2014 ನಂತರ ಸರ್ಕಾರ ನಕ್ಸಲವಾದ ಮತ್ತು ಮಾವೋವಾದ ಉಗ್ರ ಚಟುವಟಿಕೆಗಳಿಗೆ ತೀವ್ರ ಹೊಡೆತ ನೀಡಿದೆಯೆಂದು ತಿಳಿಸಿದ್ದಾರೆ. ಮೊದಲು ನೂರು ಜಿಲ್ಲೆಗಳು ನಕ್ಸಲ ಚಟುವಟಿಕೆಗಳಿಂದ ಬಾಧಿತವಾಗಿದ್ದರೆ, ಈಗ ಕೇವಲ 11 ಜಿಲ್ಲೆಗಳಷ್ಟೇ ಉಳಿದಿವೆ ಎಂದು ಮೋದಿ ಹೇಳಿದರು. ಅದರಲ್ಲಿ ಗಂಭೀರವಾಗಿ ಬಾಧಿತ ಜಿಲ್ಲೆಗಳು ಕೇವಲ ಮೂರು ಎಂದು ಅವರು ತಿಳಿಸಿದರು.

🔶 ದೇಶದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವೈಭವ

ಮೋದಿ ಹೇಳಿದರು – “ದ್ವಾದಶ ಜ್ಯೋತಿರ್ಲಿಂಗಗಳು, ಶಕ್ತಿಪೀಠಗಳು ಮತ್ತು ಚಾರ್‌ಧಾಮ್‌ಗಳು ಭಾರತದ ಆತ್ಮಶಕ್ತಿಯ ಸಂಕೇತಗಳು. ಅವು ದೇಶದ ಎಲ್ಲಾ ಭಾಗಗಳ ಜನರನ್ನು ಒಂದುಗೂಡಿಸುತ್ತದೆ.”

🔶 ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಕುರಿತು ಹೈಲೈಟ್

ಮೋದಿ ಹೇಳಿದರು – ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿಗೂ ಅಧಿಕ ಜನರನ್ನು ಬಡತನದಿಂದ ಮುಕ್ತರನಗಿಸಿದೆ. ಪಾರದರ್ಶಕ ಆಡಳಿತ, ಅವ್ಯವಹಾರರಹಿತ ನೀತಿಗಳು, ಮತ್ತು ವ್ಯಾಪಕ ಮೂಲಸೌಕರ್ಯ ಅಭಿವೃದ್ಧಿಯು ಜನರ ಹೃದಯಗಳನ್ನು ರಾಷ್ಟ್ರದೊಂದಿಗೆ ಕಟ್ಟಿ ಹಾಕಿವೆ ಎಂದು ಹೇಳಿದರು.

🔶 ವೈಭವಶಾಲಿ ಏಕತಾ ದಿನ ಪರೇಡ್

ಪ್ರಧಾನಮಂತ್ರಿ ಅವರು ನಂತರ ನಡೆದ ಏಕತಾ ದಿನ ಪರೇಡ್ ವೀಕ್ಷಿಸಿದರು.ಈ ಪರೇಡ್‌ನಲ್ಲಿ BSF, CRPF, ಮತ್ತು ವಿವಿಧ ರಾಜ್ಯ ಪೊಲೀಸ್ ಪಡೆಗಳು ಭಾಗವಹಿಸಿದ್ದವು.“Unity in Diversity (ವೈವಿಧ್ಯತೆಯಲ್ಲಿ ಏಕತೆ)” ಎಂಬ ವಿಷಯದ ಮೇಲೆ ಹತ್ತು ಆಕರ್ಷಕ ಟೇಬ್ಲೋಗಳು ಪ್ರದರ್ಶನಗೊಂಡವು.ಇಂಡಿಯನ್ ಏರ್‌ಫೋರ್ಸ್‌ನ ‘ಸೂರ್ಯ ಕಿರಣ’ ತಂಡದ ವೈಮಾನಿಕ ಪ್ರದರ್ಶನವು ಆಕಾಶದಲ್ಲಿ ತ್ರಿವರ್ಣದ ಧೈರ್ಯ ಮತ್ತು ಶೌರ್ಯವನ್ನು ಬಿಂಬಿಸಿತು.

🔶 ಮೋದಿ ಅವರ ಕರೆ

“ಏಕತೆಯೇ ನಮ್ಮ ರಾಷ್ಟ್ರದ ಬಲ. ಸರ್ದಾರ್ ಪಟೇಲ್ ಅವರ ದೃಷ್ಟಿಯನ್ನು ನೆನಸಿಕೊಂಡು, ಬಲಿಷ್ಠ ಮತ್ತು ವಿಕಸಿತ ಭಾರತಕ್ಕಾಗಿ ಒಟ್ಟಾಗಿ ಶ್ರಮಿಸೋಣ.” ಎಂದು ಕರೆ ನೀಡಿದರು.

ರಾಷ್ಟ್ರೀಯ