ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿ ಡಾ.ಉಜ್ವಲ್ ಯು.ಜೆ. ನೇಮಕ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿ ಡಾ.ಉಜ್ವಲ್ ಯು.ಜೆ. ನೇಮಕ

ಕರ್ನಾಟಕ ರಾಜ್ಯ ಸರಕಾರದ ಪ್ರತಿಷ್ಟಿತ ವಿಶ್ವೇಶ್ವರಯ್ಯ ತಾಂತ್ರಿಕ ಯುನಿವರ್ಸಿಟಿಯ ರಿಜಿಸ್ಟ್ರಾರ್ (ಇವಾಲ್ಯುವೇಶನ್ ) ಆಗಿ ಸುಳ್ಯದ ಪ್ರೊ.ಡಾ‌.ಉಜ್ವಲ್ ಯು.ಜೆ. ಆಯ್ಕೆಯಾಗಿದ್ದಾರೆ.ವಿಶ್ವೇಶ್ವರಯ್ಯ ಟೆಕ್ನಾಲಾಜಿಕಲ್ ಯುನಿವರ್ಸಿಟಿಯ ಅಧೀನದಲ್ಲಿ ರಾಜ್ಯದ ಒಟ್ಟು 240 ಇಂಜಿನಿಯರಿಂಗ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇದರ 21ನೆಯ ರಿಜಿಸ್ರ್ಟಾರ್ (ಇವಾಲ್ಯುವೇಶನ್) ಆಗಿ ಡಾ.ಉಜ್ವಲ್ ಅವರು ಇಂದು ಅಧಿಕಾರ ಸ್ವೀಕರಿಸಿದರು.

ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಮಾರು 24 ವರ್ಷ ಕಾಲ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ಬಿ ಅಧೀನದ ಶಿಕ್ಷಣ ಸಂಸ್ಥೆಗಳ ಸಿ.ಇ.ಒ.ಆಗಿ ಕಾರ್ಯನಿರ್ವಹಿಸಿ ಸಂಸ್ಥೆಯ ಉನ್ನತಿಗೆ ಶ್ರಮಿಸಿದ್ದ ಡಾ.ಉಜ್ವಲ್ ಯು.ಜೆ.ಯವರು ಇತ್ತೀಚೆಗೆ

ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಮೈಸೂರು ರಾಯಲ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿ ಸುಮಾರು ಒಂದು ತಿಂಗಳು ಕಾರ್ಯ‌ನಿರ್ವಹಿಸಿದ್ದ ಅವರು ಇದೀಗ ವಿ.ಟಿ.ಯು. ರಿಜಿಸ್ಟ್ರಾರ್ ಆಗಿ ಆಯ್ಕ್ಕೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ರಾಜ್ಯ ಶೈಕ್ಷಣಿಕ