ಇಂದೋರ್: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಒಬ್ಬ ಬೈಕ್‌ನಲ್ಲಿ ಹಿಂಬಾಲಿಸಿ, ಅಸಭ್ಯವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ.

ಶುಕ್ರವಾರ ಸಂಜೆ ಇಂದೋರ್‌ನಲ್ಲಿ ತಾವು ತಂಗಿದ್ದ ಹೋಟೆಲ್ ಸಮೀಪ ಇರುವ ಕೆಫೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ಆಟಗಾರ್ತಿಯರನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ ಬಗ್ಗೆ ವರದಿಯಾಗಿದೆ.
ಘಟನೆಯ ಬಗ್ಗೆ ಕ್ರಿಕೆಟಿಗರು ತಮ್ಮ ತಂಡದ ನಿರ್ವಹಣೆಗೆ ಮಾಹಿತಿ ನೀಡಿದ ಕೂಡಲೇ, ಪೊಲೀಸರು ತಕ್ಷಣ ಕ್ರಮ ಕೈಗೊಂಡರು. ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿ, ಕಿರುಕುಳ ಮತ್ತು ಸಾರ್ವಜನಿಕ ಅಸಭ್ಯ ವರ್ತನೆಗೆ ಸಂಬಂಧಿಸಿದ ವಿಧಿಗಳಡಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದೋರ್ ಪೊಲೀಸರ ವೇಗದ ಮತ್ತು ಸಮರ್ಪಕ ಕಾರ್ಯಾಚರಣೆಯನ್ನು ದೇಶ-ವಿದೇಶದ ಕ್ರಿಕೆಟ್ ವಲಯಗಳು ಮೆಚ್ಚುಕೆಯಿಂದ ಸ್ವಾಗತಿಸಿವೆ. ವಿದೇಶಿ ಅತಿಥಿಗಳ ಸುರಕ್ಷತೆ ಮತ್ತು ಗೌರವ ಕಾಪಾಡುವಲ್ಲಿ ಪೊಲೀಸರು ತೋರಿದ ಶೀಘ್ರ ಕ್ರಮ ಶ್ಲಾಘನೀಯವಾಗಿದೆ ಎಂದು ಅಧಿಕೃತ ವಲಯಗಳೂ ಪ್ರಶಂಸಿಸಿವೆ.

