ಮಧ್ಯಪ್ರದೇಶ:
ಅಮ್ಮ ಕುರ್ಕುರೆ ಕೊಡಲಿಲ್ಲ ಎಂದು 8 ವರ್ಷದ ಬಾಲಕನೊಬ್ಬ ನೇರವಾಗಿ ಪೊಲೀಸರಿಗೆ ಕರೆ ಮಾಡಿದ ಘಟನೆ ಸಿಂಗ್ರೌಲಿ ಜಿಲ್ಲೆಯ ಚಿತರ್ವಾಯಿ ಕಳಾ ಗ್ರಾಮದಲ್ಲಿ ನಡೆದಿದೆ.

ಬಾಲಕ ತನ್ನ ಅಮ್ಮ ತಾನು ಕೇಳಿದ ರೂ.20 ಕುರ್ಕುರೆ ತರಲಿಲ್ಲ ಹಾಗೂ ಅಮ್ಮ ಮತ್ತು ಅಕ್ಕ ಹೊಡೆದಿದ್ದಾರೆ ಎಂದು 112 ತುರ್ತು ಸಂಖ್ಯೆಗೆ ಕರೆ ಮಾಡಿ ಅಳುತ್ತಾ ದೂರು ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ಖುಟರ್ ಔಟ್ಪೋಸ್ಟ್ನ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕನ ಕರೆ ಸ್ವೀಕರಿಸಿದ 112 ಸಿಬ್ಬಂದಿ ಉಮೇಶ್ ವಿಶ್ವಕರ್ಮ ತಕ್ಷಣ ಸ್ಥಳಕ್ಕೆ ತೆರಳಿ ಬಾಲಕನಿಗೆ ಸಾಂತ್ವನ ಹೇಳಿದರು. ಅಲ್ಲದೆ ತಾಯಿಗೆ ಯಾವುದೇ ರೀತಿಯ ದೈಹಿಕ ಶಿಕ್ಷೆ ನೀಡಬಾರದು ಎಂದು ಸಲಹೆ ನೀಡಿದರು. ಬಳಿಕ ಪೊಲೀಸರೇ ಬಾಲಕನಿಗೆ ಕುರ್ಕುರೆ ಖರೀದಿಸಿ ಕೊಟ್ಟರು.

