ಬಿಗ್ಬಾಸ್ ಕನ್ನಡ ಸೀಸನ್ 12 ಆರಂಭವಾದ ಮೊದಲ ದಿನವೇ ಔಟ್ ಆದ ತುಳುನಾಡ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಈಗ ಮತ್ತೆ ಮನೆಗೆ ರೀ-ಎಂಟ್ರಿ ನೀಡಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಸ್ವತಃ ರಕ್ಷಿತಾಳಿಗೆ ಮತ್ತೊಮ್ಮೆ ಅವಕಾಶ ನೀಡಿದ್ದು, ಅವರ ಪ್ರವೇಶ ಮನೆ ಸದಸ್ಯರೊಳಗೆ ಹೊಸ ಕುತೂಹಲ ಹುಟ್ಟಿಸಿದೆ.

ಪ್ರೋಮೋದಲ್ಲಿ ಸುದೀಪ್ “ಮತ್ತೆ ಹೋಗಿ ಏನು ಮಾಡ್ತೀರಾ?” ಎಂದು ಕೇಳಿದಾಗ, ರಕ್ಷಿತಾ “ಎಲ್ಲರ ಹತ್ತಿರ ಪ್ರಾಪರ್ ರೀಸನ್ ಕೇಳ್ತಿನಿ. ಆವತ್ತು ಎಲ್ಲರೂ ಸಮಾಧಾನ ಮಾಡಿದರು, ಆದರೆ ಯಾರೂ ನನ್ನ ಜೊತೆ ನಿಲ್ಲಲಿಲ್ಲ. ನನ್ನ ಬಗ್ಗೆ ತಿಳಿಯದೇ ಕವರ್ ನೋಡಿ ಜಡ್ಜ್ ಮಾಡಿದರು. ಈಗ ನಾನು ಯೋಗ್ಯೆ ಎಂದು ತೋರಿಸ್ತಿನಿ” ಎಂದಿದ್ದಾರೆ.
ಒಂದು ವಾರ ಮನೆಗೆ ಹೊರಗಿದ್ದ ವೇಳೆ ಸ್ಪರ್ಧಿಗಳ ನಡವಳಿಕೆಯನ್ನು ವಿಶ್ಲೇಷಿಸಿಕೊಂಡಿರುವ ರಕ್ಷಿತಾ, ಇದೀಗ ಹೆಚ್ಚು ಆತ್ಮವಿಶ್ವಾಸದಿಂದ ಬಿಗ್ ಬಾಸ್ ಮನೆಗೆ ವಾಪಸ್ಸಾಗಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ರಕ್ಷಿತಾಳ ಮರಳಿಕೆ ಹೊಸ ಗೇಮ್ಪ್ಲಾನ್ಗಳಿಗೆ ದಾರಿ ಮಾಡಿಕೊಡಬಹುದೆಂದು ವೀಕ್ಷಕರು ಹೇಳುತ್ತಿದ್ದಾರೆ.

