ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಇಂದು ದಕ್ಷಿಣ ಕನ್ನಡ–ಉಡುಪಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರ ಕಚೇರಿಯ ಉದ್ಘಾಟನಾ ಸಮಾರಂಭ ನೆರವೇರಿತು.

ಈ ಸಂದರ್ಭದಲ್ಲಿ ವಿಶೇಷವಾಗಿ ಹಾಜರಾಗಿ, ನೂತನ ಕಚೇರಿಯ ಉದ್ಘಾಟನೆಗೆ ಶುಭ ಹಾರೈಕೆ ಸಲ್ಲಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟಾ. ಅವರು ಕಿಶೋರ್ ಕುಮಾರ್ ಪುತ್ತೂರಿಗೆ ಹಾರೈಸಿ, ಸ್ಥಳೀಯ ಜನತೆಗೆ ಇನ್ನಷ್ಟು ಸಮರ್ಪಿತ ಸೇವೆ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ನಗರಸಭೆಯ ಸದಸ್ಯರು, ಪಕ್ಷದ ಹಿತೈಷಿಗಳು ಹಾಗೂ ಅನೇಕ ಗಣ್ಯರು ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿದರು.

