ಮಲಯಾಳಂ ಚಲನಚಿತ್ರರಂಗದ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಸೆಪ್ಟೆಂಬರ್ 23 ರಂದು ನಡೆಯಲಿರುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಗೌರವವನ್ನು ಪ್ರಧಾನ ಮಾಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಪ್ರಕಟಿಸಿದೆ.

ಮೋಹನ್‌ಲಾಲ್ ಅವರು ಮಲಯಾಳಂ ಮಾತ್ರವಲ್ಲದೆ ಹಿಂದಿ, ತಮಿಳು, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1986ರಲ್ಲಿ ಒಂದೇ ವರ್ಷದಲ್ಲಿ 36 ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ.
ಮಲಯಾಳಂ ಚಿತ್ರರಂಗದಿಂದ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಎರಡನೇ ಕಲಾವಿದರು ಮೋಹನ್‌ಲಾಲ್. ಈ ಹಿಂದೆ 2004ರಲ್ಲಿ ಖ್ಯಾತ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ಈ ಗೌರವ ಸಿಕ್ಕಿತ್ತು.
ದಕ್ಷಿಣ ಭಾರತದ ಈ ಕೆಳಗಿನ ಗಣ್ಯರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದಾರೆ:
- 1974 – ಬಿ.ಎನ್. ರೆಡ್ಡಿ (ತೆಲುಗು)
- 1982 – ಎಲ್.ವಿ. ಪ್ರಸಾದ್ (ಆಂಧ್ರ)
- 1986 – ಬಿ. ನಾಗಿ ರೆಡ್ಡಿ (ತೆಲುಗು)
- 1990 – ಅಕ್ಕಿನೇನಿ ನಾಗೇಶ್ವರ ರಾವ್ (ತೆಲುಗು)
- 1995 – ಡಾ. ರಾಜ್‌ಕುಮಾರ್ (ಕನ್ನಡ)
- 1996 – ಶಿವಾಜಿ ಗಣೇಶನ್ (ತಮಿಳು)
- 2004 – ಅಡೂರು ಗೋಪಾಲಕೃಷ್ಣನ್ (ಮಲಯಾಳಂ)
- 2009 – ಡಿ. ರಾಮಾನಾಯ್ಡು (ತೆಲುಗು)
- 2010 – ಕೆ. ಬಾಲಚಂದರ್ (ತಮಿಳು)
- 2016 – ಕೆ. ವಿಶ್ವನಾಥ್ (ತೆಲುಗು)
- 2019 – ರಜನೀಕಾಂತ್ (ತಮಿಳು)
- 2023 – ಮೋಹನ್‌ಲಾಲ್ (ಮಲಯಾಳಂ
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಮೋಹನ್‌ಲಾಲ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 🎬✨

