ಧರ್ಮಸ್ಥಳ-ಬಂಗ್ಲೆಗುಡ್ಡೆ: ಅಸ್ಥಿಪಂಜರ ಪತ್ತೆ,  ಶೋಧ ಕಾರ್ಯ ತೀವ್ರಗೊಳಿಸಿದ ಎಸ್‌ ಐ ಟಿ

ಧರ್ಮಸ್ಥಳ-ಬಂಗ್ಲೆಗುಡ್ಡೆ: ಅಸ್ಥಿಪಂಜರ ಪತ್ತೆ, ಶೋಧ ಕಾರ್ಯ ತೀವ್ರಗೊಳಿಸಿದ ಎಸ್‌ ಐ ಟಿ

ಮಂಗಳೂರು: ಧರ್ಮಸ್ಥಳದ ಬಂಗ್ಲೆಗುಡ್ಡೆ ಕಾಡಿನಲ್ಲಿ ಬುರುಡೆ ಹಾಗೂ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆ ವಿಶೇಷ ತನಿಖಾ ತಂಡ (SIT) ಶೋಧ ಕಾರ್ಯವನ್ನು ತೀವ್ರಗೊಳಿಸಿದೆ. ಸಾಕ್ಷಿದಾರನಾಗಿ ಬಂದಿದ್ದ ಚಿನ್ನಯ್ಯನ ವಿಚಾರಣೆಯ ನಂತರ ಸೌಜನ್ಯಾ ಅವರ ಮಾವ ವಿಠಲ್ ಗೌಡ ನೀಡಿದ ಹೇಳಿಕೆಯ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆದಿದ್ದು, ಅಸ್ಥಿಪಂಜರ ಪತ್ತೆಯಾಗಿದೆ.

ಇಂದು ನಡೆದ ಕಾರ್ಯಾಚರಣೆಯಲ್ಲಿ ಐದಾರು ಕಡೆಗಳಲ್ಲಿ ಮೂಳೆಗಳು, ಬಟ್ಟೆಗಳ ತುಂಡುಗಳು ಹಾಗೂ ಅವಶೇಷಗಳು ಪತ್ತೆಯಾದವು. ಎಸ್‌ಐಟಿ ತಂಡವು ಇವುಗಳನ್ನು ಸಂಗ್ರಹಿಸಿ, ಸಾಕ್ಷ್ಯವಾಗಿ ದಾಖಲಿಸಿಕೊಂಡಿದೆ. ಬಕೆಟ್‌ಗಳು, ಗೋಣಿಗಳು ಮತ್ತು ಬಾಕ್ಸ್‌ಗಳಲ್ಲಿ ಮೂಳೆಗಳನ್ನು ತೆಗೆದುಕೊಂಡು ಬಂದಿದ್ದು,ನಾಳೆಯೂ ಶೋಧ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆಗಳಿದ್ದು, ಭೂಮಿ ಅಗೆದಿಲ್ಲದೆ ಮೇಲ್ಭಾಗದಲ್ಲೇ ಶೋಧ ನಡೆಯಲಿದೆ. ಧರ್ಮಸ್ಥಳದ ಬಂಗ್ಲೆಗುಡ್ಡ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಅನುಮಾನಗಳು ಇತ್ತೀಚೆಗೆ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ, ಎಸ್‌ಐಟಿ ಕಾರ್ಯಾಚರಣೆ ಹೆಚ್ಚು ಕುತೂಹಲ ಹುಟ್ಟಿಸಿದೆ.

ಅಪರಾಧ ರಾಜ್ಯ ರಾಷ್ಟ್ರೀಯ