ಉತ್ತರಾಖಂಡ್ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ 35 ದಿನಗಳ ಬಳಿಕ ಗಂಗೋತ್ರಿ ಧಾಮ ಸೇರಿದಂತೆ ಚಾರ್ ಧಾಮ್ ಯಾತ್ರೆ ಪುನರಾರಂಭಗೊಂಡಿದೆ. ಕಳೆದ ತಿಂಗಳು ಭಾರೀ ಮಳೆ ಹಾಗೂ ಧರಾಳಿ ಪ್ರದೇಶದಲ್ಲಿ ಸಂಭವಿಸಿದ ದುರಂತದಿಂದಾಗಿ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ಹಲವು ಕಡೆ ಹಾನಿಗೊಳಗಾಗಿತ್ತು.

ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಆಡಳಿತ ಹಾಗೂ ಬಿಆರ್‌ಒ (BRO) ಅವರ ಸತತ ಪರಿಶ್ರಮದಿಂದ ಹಾನಿಗೊಳಗಾದ ಹೆದ್ದಾರಿ ಭಾಗಗಳನ್ನು ಮರುಸ್ಥಾಪಿನೆ ಮಾಡಲಾಗಿದೆ. ಇದರೊಂದಿಗೆ ಭಕ್ತರಿಗೆ ಮತ್ತೆ ಗಂಗೋತ್ರಿ ಧಾಮದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಭಕ್ತರ ಅನುಕೂಲಕ್ಕಾಗಿ ಪ್ರಯಾಣದ ಮಾರ್ಗದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಯಾತ್ರಿಕರಿಗೆ ಸುರಕ್ಷಿತ ಪ್ರಯಾಣದ ಭರವಸೆ ನೀಡಲಾಗಿದೆ.

