ಜೆರುಸಲೇಂ, ಸೆ.8: ಹಮಾಸ್ ಉಗ್ರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಶರಣಾಗದಿದ್ದರೆ ಗಾಜಾದಲ್ಲಿ ಭೀಕರ ಪರಿಣಾಮ ಎದುರಾಗಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಎಚ್ಚರಿಸಿದ್ದಾರೆ. ಅವರು ಸೋಮವಾರ ನೀಡಿದ ಎಚ್ಚರಿಕೆಯಲ್ಲಿ, “ಇಸ್ರೇಲ್ ಶತ್ರುಗಳ ವಿರುದ್ಧ ಅಂತಿಮ ಹಂತದ ಹೋರಾಟಕ್ಕೆ ಸಜ್ಜಾಗಿದೆ. ಹಮಾಸ್ ಇನ್ನೂ ಒತ್ತೆಯಾಳುಗಳನ್ನು ಹಿಡಿದುಕೊಂಡಿದ್ದರೆ, ಅದು ಅವರಿಗೂ, ಗಾಜಾದ ಜನರಿಗೂ ಸರ್ವನಾಶ ತರುವಂತಾಗುತ್ತದೆ” ಎಂದು ಹೇಳಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಈಗಾಗಲೇ ತೀವ್ರಗೊಂಡಿದ್ದು, ನಿರಂತರ ದಾಳಿ ಹಾಗೂ ಪ್ರತಿದಾಳಿಗಳಿಂದ ಗಾಜಾದಲ್ಲಿ ಮಾನವೀಯ ಸಂಕಟ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಕಾಟ್ಜ್ ನೀಡಿದ ಎಚ್ಚರಿಕೆ ಮತ್ತಷ್ಟು ಗಂಭೀರತೆ ಪಡೆದಿದೆ.

