ಶ್ರೀ ನಾರಾಯಣ ಗುರು ಅವರ ಜನ್ಮ ಜಯಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂದೇಶದಲ್ಲಿ, ಸಮಾನತೆ, ಕರುಣೆ ಮತ್ತು ವಿಶ್ವಸೌಹಾರ್ದತೆ ಕುರಿತ ಗುರುಗಳ ಬೋಧನೆಗಳು ಇಂದಿಗೂ ಸಮಾಜದಲ್ಲಿ ಪ್ರತಿಧ್ವನಿಸುತ್ತಿವೆ ಎಂದು ಹೇಳಿದರು.
ಸಮಾಜ ಸುಧಾರಣೆ ಮತ್ತು ಶಿಕ್ಷಣ ವಿಸ್ತರಣೆಗೆ ಶ್ರೀ ನಾರಾಯಣ ಗುರು ನೀಡಿದ ಕರೆ ಪೀಳಿಗೆಗಳನ್ನು ಪ್ರೇರೇಪಿಸುತ್ತಿದೆ ಎಂದು ಪ್ರಧಾನಿ ನೆನಪಿಸಿಕೊಂಡರು.


