ಸೂರತ್‌ನ ಆಲ್ಥಾನ್ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಮಹಿಳೆಯೊಬ್ಬರು ತನ್ನ ಎರಡು ವರ್ಷದ ಮಗನನ್ನು 13ನೇ ಮಹಡಿಯಿಂದ ಕೆಳಗೆ ತಳ್ಳಿ, ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಪೂಜಾ ಎಂದು ಪೊಲೀಸರು ಗುರುತಿಸಿದ್ದು, ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.

ಪೊಲೀಸರ ಪ್ರಕಾರ, ಶವಗಳು ಗಣಪತಿ ವಿಗ್ರಹವನ್ನು ಇರಿಸಲಾಗಿದ್ದ ಸ್ಥಳದಿಂದ ಕೇವಲ 20 ಅಡಿ ದೂರದಲ್ಲಿ ಪತ್ತೆಯಾಗಿವೆ. ಹಬ್ಬದ ಸಂಭ್ರಮದಲ್ಲಿ ತೊಡಗಿದ್ದ ಸ್ಥಳೀಯರಿಗೆ ಘಟನೆ ಸಂಭವಿಸಿದ ತಕ್ಷಣವೇ ತಿಳಿಯಲಿಲ್ಲ. ಸಿಸಿಟಿವಿ ದೃಶ್ಯಗಳಲ್ಲಿ ಪೂಜಾ ಮಗನನ್ನು ಲಿಫ್ಟ್ ಮೂಲಕ ಮೇಲಕ್ಕೆ ಕರೆದೊಯ್ಯುತ್ತಿರುವುದು, ಬಳಿಕ 13ನೇ ಮಹಡಿಯಲ್ಲಿ ಕೆಳಗೆ ತಳ್ಳುತ್ತಿರುವುದು ಹಾಗೂ ತಾನೂ ಕೂಡ ಹಾರಿ ಪ್ರಾಣ ಬಲಿಯಾದ ದೃಶ್ಯಗಳು ದಾಖಲಾಗಿವೆ.
ಘಟನೆಯ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕುಟುಂಬವು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳು ಪೂಜಾ ಅವರ ಮೊಬೈಲ್ ಫೋನ್ ವಶಪಡಿಸಿಕೊಂಡು, ಆತ್ಮಹತ್ಯೆಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಲು ಡೇಟಾವನ್ನು ವಿಶ್ಲೇಷಿಸುತ್ತಿದ್ದಾರೆ.

