ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಯಶಸ್ವಿಯಾಗಿ ಜಾರಿಯಲ್ಲಿರುವಾಗ, ಇದೀಗ ಡೀಸೆಲ್ ಸರದಿ ಬಂದಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶೀಘ್ರದಲ್ಲೇ 10% ಐಸೊಬ್ಯುಟನಾಲ್ ಮತ್ತು 90% ಡೀಸೆಲ್ ಮಿಶ್ರಣವನ್ನು ಬಳಸುವ ಹೊಸ ಯೋಜನೆಯನ್ನು ಪರಿಚಯಿಸಲು ಮುಂದಾಗಿದ್ದಾರೆ.

ಈ ಮಿಶ್ರಣವನ್ನು ಟ್ರಕ್‌ಗಳು, ಬಸ್‌ಗಳು ಮತ್ತು ಜೆಸಿಬಿಗಳಲ್ಲಿ ಬಳಸುವ ಮೂಲಕ ಪರ್ಯಾಯ ಇಂಧನ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಆದರೆ ತಜ್ಞರ ಅಂದಾಜು ಪ್ರಕಾರ, ಈ ಮಿಶ್ರಣವು ವಾಹನಗಳ ಮೈಲೇಜ್ ಅನ್ನು ಸರಾಸರಿ 2-3 ಕಿ.ಮೀ ಕಡಿಮೆ ಮಾಡಬಹುದು.
👉 ಇಂಧನ ಆಮದು ಕಡಿತ, ಪರಿಸರ ಸ್ನೇಹಿ ಪ್ರಯೋಗ ಹಾಗೂ ಸ್ವದೇಶೀ ಪರ್ಯಾಯ ಇಂಧನ ಬಳಕೆ ಉತ್ತೇಜನವೇ ಈ ಯೋಜನೆಯ ಪ್ರಮುಖ ಉದ್ದೇಶ. ಆದರೆ, ಪೆಟ್ರೋಲ್ ಮಿಶ್ರಣದಿಂದಲೇ ಈಗಾಗಲೇ ಮೈಲೇಜ್ ಕಡಿಮೆಯಾಗಿ ಗ್ರಾಹಕರು ಸಂಕಷ್ಟ ಅನುಭವಿಸುತ್ತಿರುವಾಗ, ಡೀಸೆಲ್‌ನಲ್ಲಿ ಮಿಶ್ರಣ ಪ್ರಾರಂಭವಾದರೆ ಇನ್ನಷ್ಟು ತೊಂದರೆ ಹೆಚ್ಚುವ ಸಾಧ್ಯತೆ ವ್ಯಕ್ತವಾಗಿದೆ.

